ಮೈಸೂರು: ಕರ್ನಾಟಕದ ಪ್ರಣವ್ ಅಶ್ವಥ್ ಸ್ಪಿನ್ ಮೋಡಿಗೆ (24ಕ್ಕೆ 5) ತತ್ತರಿಸಿದ ಒಡಿಶಾ ತಂಡ, ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 147 ರನ್ಗೆ ಕುಸಿಯಿತು. 161ರನ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಒಡಿಶಾ, ವಿಕೆಟ್ ನಷ್ಟವಿಲ್ಲದೆ 33 ರನ್ ಗಳಿಸಿದೆ.

ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನದಾಟದಲ್ಲಿ 8 ವಿಕೆಟ್ಗೆ 298 ರನ್ ಗಳಿಸಿದ್ದ ಆತಿಥೇಯ ತಂಡ ಶುಕ್ರವಾರ 10 ರನ್ ಸೇರಿಸುವಷ್ಟರಲ್ಲಿ ಆಲೌಟ್ ಆಯಿತು.

ಸವಾಲಿನ ಮೊತ್ತ ಬೆನ್ನತ್ತಿದ ಒಡಿಶಾ ತಂಡಕ್ಕೆ ಕರ್ನಾಟಕದ ಈಶ ಪುತ್ತಿಗೆ (32ಕ್ಕೆ2) ಆರಂಭಿಕ ಆಘಾತ ನೀಡಿದರು. ಪ್ರಯಾಣ್ ಸಾಮಲ್ ಹಾಗೂ ಆಯುಷ್ ಸುತಾರ್ ಅವರನ್ನು ಬೇಗನೆ ಔಟ್ ಮಾಡಿದರು. ಸಂಬೀತ್ ಕೆ.ಬೇಜಾ (48 ರನ್) ಹೋರಾಟ ತೋರಿದರು. ಒಂದು ಹಂತದಲ್ಲಿ 92 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದ ಒಡಿಶಾ ನಂತರ ಪ್ರಣವ್ ಸ್ಪಿನ್ ದಾಳಿಗೆ ಸಿಲುಕಿತು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ: 95.5 ಓವರ್ಗಳಲ್ಲಿ 308 (ಎಸ್. ಗಗನ್ ರಾವ್ 61, ಶಿವಂ ಸಿಂಗ್ 49, ಸೈಯದ್ ತುಫೈಲ್ ಅಹಮ್ಮದ್ 66ಕ್ಕೆ 4) ಒಡಿಶಾ: 62.5 ಓವರ್ಗಳಲ್ಲಿ 147 (ಸಂಬೀತ್ ಬೇಜಾ 48, ಪ್ರಣವ್ ಅಶ್ವಥ್ 24ಕ್ಕೆ 5, ಧೀರಜ್ ಗೌಡ 40ಕ್ಕೆ 3) ಎರಡನೇ ಇನಿಂಗ್ಸ್: ಒಡಿಶಾ: 17 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 33 (ಆಯುಷ್ ಸುತರ್ ಔಟಾಗದೇ 18, ಪ್ರಯಾಣ್ ಸಾಮಲ್ ಔಟಾಗದೇ 13)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.