ದಾವಣಗೆರೆ: ಆತಿಥೇಯ ದಾವಣಗೆರೆ, ಮಂಗಳೂರು, ಬೆಂಗಳೂರು ಉತ್ತರ ಮತ್ತು ಕ್ಯಾಲಿಕಟ್ ವಿಶ್ವವಿದ್ಯಾಲಯದ ಪುರುಷರ ತಂಡಗಳು ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಕೊಕ್ಕೊ ಟೂರ್ನಿಗೆ ಅರ್ಹತೆ ಪಡೆದಿವೆ.

ದಾವಣಗೆರೆ ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಟೂರ್ನಿಯಲ್ಲಿ ಒಟ್ಟು 89 ತಂಡಗಳು ಪಾಲ್ಗೊಂಡಿದ್ದವು. ಈ ಪೈಕಿ ಎಂಟು ತಂಡಗಳು ಅರ್ಹತಾ ಹಂತ ಪ್ರವೇಶಿಸಿದ್ದವು. ಇದರಲ್ಲಿ ಗೆದ್ದಿರುವ ದಾವಣಗೆರೆ, ಮಂಗಳೂರು, ಬೆಂಗಳೂರು ಉತ್ತರ ಮತ್ತು ಕ್ಯಾಲಿಕಟ್ ತಂಡಗಳು ಈಗ ಲೀಗ್ ಹಂತದಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದು, ಅಗ್ರ ನಾಲ್ಕು ಸ್ಥಾನಗಳಿಗಾಗಿ ಪೈಪೋಟಿ ನಡೆಸಲಿವೆ.

ವಿ.ವಿ.ಆವರಣದ ಅಂಗಳದಲ್ಲಿ ಶನಿವಾರ ನಡೆದ ಅರ್ಹತಾ ಹಂತದ ಪಂದ್ಯದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ 13–11 ಪಾಯಿಂಟ್ಸ್ನಿಂದ ಮದ್ರಾಸ್ ವಿಶ್ವವಿದ್ಯಾಲಯ ತಂಡವನ್ನು ಮಣಿಸಿತು. ಆತಿಥೇಯ ತಂಡದ ಟಿ. ಹುಲಗಪ್ಪ ಮತ್ತು ಜೆ.ಜಿ.ಶರತ್ ಉತ್ತಮ ಆಟ ಆಡಿದರು.

ರೋಚಕತೆಯೊಂದಿಗೆ ಸಾಗಿದ್ದ ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ 16–15ರಿಂದ ಕೊಯಮತ್ತೂರಿನ ಭಾರತೀಯಾರ್ ವಿ.ವಿ.ತಂಡದ ವಿರುದ್ಧ ಗೆದ್ದಿತು. ಐವಾನ್ ಪಾಷಾ 6 ಅಂಕ ಗಳಿಸಿ ತಂಡದ ಜಯದಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಮಂಗಳೂರು ವಿಶ್ವವಿದ್ಯಾಲಯ ತಂಡವು ಮೈಸೂರು ವಿ.ವಿ ವಿರುದ್ಧದ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿತು. ಈ ತಂಡ 14–4ರಿಂದ ವಿಜಯಿಯಾಯಿತು. ಅಭಿಜಿತ್ ಮತ್ತು ನಿಖಿಲ್ ಉತ್ತಮ ಸಾಮರ್ಥ್ಯ ತೋರಿದರು. ಕ್ಯಾಲಿಕಟ್ ವಿಶ್ವವಿದ್ಯಾಲಯವು 18–16ರಿಂದ ಕೇರಳ ವಿಶ್ವವಿದ್ಯಾಲಯ ತಂಡವನ್ನು ಸೋಲಿಸಿತು.

ಅಖಿಲ ಭಾರತ ಟೂರ್ನಿ ಏಪ್ರಿಲ್ 12 ರಿಂದ 16ರವರೆಗೆ ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಛತ್ರಪತಿ ಸಾಹೂಜಿ ಮಹಾರಾಜ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.