ನವದೆಹಲಿ: ಕೆಳ ತಿಂಗಳಿಂದ ಕ್ರೀಡೆಗೆ ಕಳಂಕ ತಂದಿರುವ ಲೈಂಗಿಕ ಕಿರುಕುಳ, ದುರ್ನಡತೆ ಮತ್ತು ಅಶಿಸ್ತಿನ ಪ್ರಕರಣಗಳ ಕುರಿತು ಸಮಾಲೋಚಿಸಲು ‘ಹಾಕಿ ಇಂಡಿಯಾ’ ತುರ್ತು ಕಾರ್ಯಕಾರಿ ಮಂಡಳಿ ಸಭೆ ಕರೆಯಲು ಸಜ್ಜಾಗಿದೆ. ತಪ್ಪಿತಸ್ಥರಿಗೆ ಆಜೀವ ನಿಷೇಧ ಸೇರಿ ಕಠಿಣ ಕ್ರಮ ಕುರಿತು ಚರ್ಚೆಯಾಗಲಿದೆ.

ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರು ಕಾರ್ಯಕಾರಿ ಮಂಡಳಿ ಸದಸ್ಯರಿಗೆ ಇ–ಮೇಲ್ ಕಳುಹಿಸಿದ್ದಾರೆ. ಅದರಲ್ಲಿ ಲೈಂಗಿಕ ಕಿರುಕುಳ, ಅಧಿಕಾರದ ದುರುಪಯೋಗ ಮತ್ತು ನೈತಿಕ ದುಷ್ಕೃತ್ಯದ ಬಗ್ಗೆ ‘ಶೂನ್ಯ ಸಹಿಷ್ಣುತೆ’ಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ವರದಿಯಾದ ಪ್ರಕರಣಗಳ ಪರಿಶೀಲನೆ, ಉದ್ಯೋಗ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆ ಕಾಯ್ದೆ–2013’ (ಪಾಷ್ ಕಾಯ್ದೆ) ಅಡಿ ವರದಿ ಮಾಡುವ ಕಾರ್ಯವಿಧಾನ ಬಲಪಡಿಸುವಿಕೆ, ದೂರುದಾರರಿಗೆ ರಕ್ಷಣೆ ಖಚಿತಪಡಿಸುವುದು, ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಹೊಣೆಗಾರಿಕೆಯನ್ನು ನಿಗದಿಪಡಿಸುವ ವಿಷಯಗಳು ಸಭೆಯಲ್ಲಿ ಚರ್ಚೆಯಾಗುವ ನಿರೀಕ್ಷೆಯಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-4-1756889820

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.