ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಬ್ ಜೂನಿಯರ್, ಜೂನಿಯರ್ ರಾಷ್ಟ್ರೀಯ ಈಜು: ಧೀನಿಧಿ, ಋಜಲಾ ಕೂಟ ದಾಖಲೆ

Published 8 ಆಗಸ್ಟ್ 2024, 22:07 IST
Last Updated 8 ಆಗಸ್ಟ್ 2024, 22:07 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಧೀನಿಧಿ ದೇಸಿಂಗು ಮತ್ತು ಋಜುಲಾ ಎಸ್‌. ಅವರು ಒಡಿಶಾದ ಭುವನೇಶ್ವರದಲ್ಲಿ ನಡೆಯುತ್ತಿರುವ 40ನೇ ಸಬ್ ಜೂನಿಯರ್ ಮತ್ತು 50ನೇ ಜೂನಿಯರ್ ರಾಷ್ಟ್ರೀಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಕೂಟ ದಾಖಲೆ ನಿರ್ಮಿಸಿದರು.

ಬಾಲಕಿಯರ ಗುಂಪು–2ರ 50 ಮೀ ಫ್ರೀಸ್ಟೈ ವಿಭಾಗದಲ್ಲಿ 26.89 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಬರೆದರು. ಬಾಲಕಿಯರ ಗುಂಪು–1ರ 50 ಮೀ.ಫ್ರೀಸ್ಟೈಲ್‌ ವಿಭಾಗದಲ್ಲಿ ಋಜಲಾ 26.91 ಸೆಕೆಂಡುಗಳಲ್ಲಿ ಗುರಿ ತಲುಪಿದರು.

ಕರ್ನಾಟಕದ ಸ್ಪರ್ಧಿಗಳ ಫಲಿತಾಂಶಗಳು: ಬಾಲಕಿಯರ ಗುಂಪು–1: 400 ಮೀ. ಮೆಡ್ಲೆ: ಹಷಿಕಾ ರಾಮಚಂದ್ರ (5ನಿ 08.79 ಸೆ)–1, ರಿತಿಕಾ ಮಹೇಶ ಬೆಂಗಳೂರು (5ನಿ 17.99ಸೆ)–2. 50 ಮೀ. ಬ್ಯಾಕ್‌ಸ್ಟ್ರೋಕ್‌: ವಿಹಿತಾ ನಯನಾ ಲೋಗನಾಥನ್‌ (30.44ಸೆ)–1. 50 ಮೀ. ಫ್ರೀಸ್ಟೈಲ್‌: ಋಜಲಾ ಎಸ್‌. (26.91 ಸೆ)–1.

ಗುಂಪು–2: 100 ಮೀ. ಬಟರ್‌ಫ್ಲೈ: ತ್ರಿಶಾ ಸಿಂಧು ಎಸ್‌. (1 ನಿ 07.86 ಸೆ)–3. 50 ಮೀ ಬ್ಯಾಕ್ಸ್‌ ಸ್ಟ್ರೋಕ್‌: ನೈಶಾ (32.21ಸೆ)–3. 50 ಮೀ ಫ್ರೀಸ್ಟೈಲ್‌: ಧೀನಿಧಿ ದೇಸಿಂಗು (26.89ಸೆ)–1, ಚರಿತಾ ಫಣೀಂದ್ರನಾಥ್‌ (28.05ಸೆ)–3. 1500 ಮೀ. ಫ್ರೊಸ್ಟೈಲ್‌: ಅದಿತಿ ವಿನಾಯಕ ರೆಲೆಕರ್‌: (18ನಿ 42.62ಸೆ)–3.

ಗುಂ‍ಪು–3: 100 ಮೀ ಬ್ರೆಸ್ಟ್‌ಸ್ಟ್ರೋಕ್‌: ಶ್ರೇಯಾ ಸುರೇಶ್‌ ಪೂಜಾರ್‌ (1ನಿ 26.82ಸೆ)–3. 400 ಮೀ.ಫ್ರೀಸ್ಟೈಲ್‌: ಸ್ತುತಿ ಸಿಂಗ್‌ (5ನಿ 04.29 ಸೆ)–3.

ಬಾಲಕರ ಗುಂಪು–1: 200 ಮೀ.ಬ್ರೆಸ್ಟ್‌ಸ್ಟ್ರೋಕ್‌: ಕ್ರಿಷ್‌ ಕುಮಾರ್‌ (2 ನಿ 26.30ಸೆ)–2. ಗುಂಪು–2: 50 ಮೀ.ಬ್ಯಾಕ್‌ಸ್ಟ್ರೋಕ್‌: ಸಮರ್ಥ್‌ ಗೌಡ ಬಿ.ಎಸ್‌.(28.30ಸೆ)–1. ಗುಂಪು–3: 400 ಮೀ. ಫ್ರೀಸ್ಟೈಲ್‌: ಅಮಿತ್‌ ಎಚ್‌.ಪವನ್‌ (4 ನಿ. 50.40ಸೆ)–2, ಲೋಹಿತಾಶ್ವ ನಾಗೇಶ್‌ ಶಶಿಕುಮಾರ್‌ (4ನಿ 54.49 ಸೆ)–3. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT