ಪ್ಯಾರಿಸ್: ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಡೆಯುತ್ತಿದ್ದರೂ, ಡೈಮಂಡ್ ಲೀಗ್ನ ಮೊದಲ ಕೂಟ, ಈ ಮೊದಲು ಯೋಜಿಸಿದಂತೆ ಮೇ 8ರಂದು ಕತಾರ್ನ ರಾಜಧಾನಿ ದೋಹಾದಲ್ಲೇ ನಡೆಯಲಿದೆ ಎಂದು ಈ ಎಲೀಟ್ ಅಥ್ಲೆಟಿಕ್ ಸರ್ಕಿಟ್ ಕೂಟದ ವ್ಯವಸ್ಥಾಪಕರು ಶುಕ್ರವಾರ ಪ್ರಕಟಿಸಿದ್ದಾರೆ.

‘ದೋಹಾದಲ್ಲಿನ ಪರಿಸ್ಥಿತಿಯ ಮೇಲೆ ಡೈಮಂಡ್ ಲೀಗ್, ಸ್ಥಳೀಯ ಆಯೋಜನಾ ಸಮಿತಿಯ ಕತಾರ್ ಅಥ್ಲೆಟಿಕ್ಸ್ ಫೆಡರೇಷನ್, ವಿಶ್ವ ಅಥ್ಲೆಟಿಕ್ಸ್ ಜೊತೆ ಚರ್ಚಿಸಿ ನಿಗಾ ಇಡಲಿದೆ’ ಎಂದು ಹೇಳಿಕೆ ತಿಳಿಸಿದೆ.

‘ಅಥ್ಲಿಟುಗಳು ಮತ್ತು ಪ್ರೇಕ್ಷಕರ ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ಇತರ ಭಾಗೀದಾರರ ಜೊತೆಗೂಡಿ ಪರ್ಯಾಯ ಆಯ್ಕೆಗಳ ಬಗ್ಗೆಯೂ ಯೋಚಿಸಲಾಗುವುದು. ನಿಗದಿ ದಿನಕ್ಕಿಂತ ಒಂದು ತಿಂಗಳು ಮೊದಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಡೈಮಂಡ್ ಲೀಗ್, ಟ್ರ್ಯಾಕ್ ಅಂಡ್ ಫೀಲ್ಡ್ನ ಒಂದು ದಿನ ಎಲೀಟ್ ಕೂಟವಾಗಿದೆ. ನಾಲ್ಕು ಖಂಡಗಳ 13 ದೇಶಗಳಲ್ಲಿ ಒಟ್ಟು 14 ಕೂಟಗಳು ನಡೆಯಲಿವೆ.

ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಯುದ್ಧಸಾರಿದ ನಂತರ ಪಶ್ಚಿಮ ಏಷ್ಯಾದ ವಿವಿಧ ದೇಶಗಳಲ್ಲಿ ನಿಗದಿಯಾಗಿರುವ ಕೆಲವು ಕ್ರೀಡಾಕೂಟಗಳು ಈಗಾಗಲೇ ಮುಂದಕ್ಕೆ ಹೋಗಿವೆ.

ಬಹರೇನ್ ಮತ್ತು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಿಗದಿಯಾಗಿದ್ದ ಫಾರ್ಮುಲಾ ವನ್ ಗ್ರ್ಯಾನ್ ಪ್ರಿ ಕೂಟಗಳೂ ಇದರಲ್ಲಿ ಸೇರಿವೆ. ಇವು ಏಪ್ರಿಲ್ ತಿಂಗಳ ಮಧ್ಯಭಾಗದಲ್ಲಿ ನಿಗದಿಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.