ಮಸ್ಕತ್: ಅಧಿಕಾರಯುತ ಆಟವಾಡಿದ ಭಾರತ ತಂಡ 16–0 ಗೋಲುಗಳಿಂದ ದುರ್ಬಲ ಚೀನಾ ತೈಪಿ ತಂಡವನ್ನು ಮಣಿಸಿ ಪುರುಷರ ಜೂನಿಯರ್ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಶನಿವಾರ ಸೆಮಿಫೈನಲ್ಗೆ ಲಗ್ಗೆಯಿಟ್ಟಿತು.

ದಿಲ್ರಾಜ್ ಸಿಂಗ್ ನಾಲ್ಕು ಗೋಲುಗಳನ್ನು ಗಳಿಸಿದರೆ, ರೋಷನ್ ಕುಜೂರ್ ಮರ್ತು ಸೌರಭ್ ಆನಂದ್ ಕುಶ್ವಾಹ ಅವರು ಹ್ಯಾಟ್ರಿಕ್ ಸಾಧಿಸಿದರು. ಹಾಲಿ ಚಾಂಪಿಯನ್ ಭಾರತ ಎದುರಾಳಿಗಳನ್ನು ಸಂಪೂರ್ಣವಾಗಿ ಅಂಕೆಯಲ್ಲಿಟ್ಟಿತು.

ಪಿ.ಆರ್.ಶ್ರೀಜೇಶ್ ಗರಡಿಯಲ್ಲಿರುವ ಭಾರತ ತಂಡ ‘ಎ’ ಗುಂಪಿನಲ್ಲಿ 9 ಪಾಯಿಂಟ್ಸ್ ಸಂಗ್ರಹಿಸಿ ಅಗ್ರಸ್ಥಾನದಲ್ಲಿದೆ. ಜಪಾನ್ (6) ಸಹ ಇನ್ನೂ ಒಂದು ಸುತ್ತು ಇರುವಂತೆ ಅಂತಿಮ ನಾಲ್ಕರ ಘಟಕ್ಕೆ ಅರ್ಹತೆ ಪಡೆಯಿತು.

ಭಾರತ ಗುಂಪಿನಲ್ಲಿ ತನ್ನ ಕೊನೆಯ ಪಂದ್ಯವನ್ನು ಕೊರಿಯಾ ವಿರುದ್ಧ ಭಾನುವಾರ ಆಡಲಿದೆ. ಸೆಮಿಫೈನಲ್ ಪಂದ್ಯಗಳು ಡಿ. 3ರಂದು ನಡೆಯಲಿದೆ.

ಅರ್ಷದೀಪ್ ಸಿಂಗ್ ಎರಡು ಗೋಲು ಗಳಿಸಿದರೆ, ಯೋಗೆಂಬರ್ ರಾವತ್, ಪ್ರಿಯವೃತ ತಲೆಮ್, ಶಾರದಾನಂದ ತಿವಾರಿ, ಅರಿಜಿತ್ ಸಿಂಗ್ ಹುಂಡಲ್ ತಲಾ ಒಂದೊಂದು ಗೋಲು ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.