ಚೆನ್ನೈ: ಈ ಋತುವಿನ ಟೂರ್ನಿಗಳಲ್ಲಿ ನಿರಾಶೆ ಅನುಭವಿಸಿರುವ ಕಾರಣ ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಈ ವರ್ಷ ಆಡಲಿರುವ ಟೂರ್ನಿಗಳನ್ನು ಕಡಿತಗೊಳಿಸಿದ್ದಾರೆ. ಗ್ರ್ಯಾಂಡ್ ಚೆಸ್ ಟೂರ್ನ ಎರಡು ಟೂರ್ನಿಗಳಲ್ಲಿ ಮಾತ್ರ ಆಡಿ, ವಿಶ್ವ ಚಾಂಪಿಯನ್ಷಿಪ್ ಪಟ್ಟ ಉಳಿಸಿಕೊಳ್ಳುವತ್ತ ಸಿದ್ಧತೆ ನಡೆಸಲು ಅವರು ಮಂಗಳವಾರ ನಿರ್ಧರಿಸಿದ್ದಾರೆ.

2025ರ ನವೆಂಬರ್ನಲ್ಲಿ ತವರಿನಲ್ಲಿ (ಗೋವಾ) ನಡೆದ ಚೆಸ್ ವಿಶ್ವಕಪ್ನಲ್ಲಿ ಅವರು ಅಗ್ರ ಶ್ರೇಯಾಂಕ ಗಳಿಸಿದ್ದರೂ ಬೇಗನೇ ಹೊರಬಿದ್ದಿದ್ದರು. ಡಿಸೆಂಬರ್ನಲ್ಲಿ ವಿಶ್ವ ರ್ಯಾಪಿಡ್ ಮತ್ತು ಬ್ಲಿಟ್ಝ್ ಚಾಂಪಿಯನ್ಷಿಪ್ಗಳಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಟೈಬ್ರೇಕ್ ನಂತರ ಹತ್ತನೇ ಸ್ಥಾನ ಗಳಿಸಿದ್ದರು. ಇತ್ತೀಚೆಗೆ ಪ್ರೇಗ್ ಚೆಸ್ ಉತ್ಸವದಲ್ಲಿ 9ನೇ ಸ್ಥಾನ ಪಡೆದಿದ್ದರು.

‘ಕಳೆದ ಕೆಲವು ಟೂರ್ನಿಗಳಲ್ಲಿ ನನ್ನ ಆಟ ನಿರಾಶಾದಾಯಕವಾಗಿದೆ. ನನಗಷ್ಟೇ ಅಲ್ಲ, ನನ್ನನ್ನು ಬೆಂಬಲಿಸಿದವರಿಗೂ ಸಹ’ ಎಂದು ಗುಕೇಶ್ ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ. ‘ತವರಿನಿಂದ ಆಚೆ ದೀರ್ಘಾವಧಿಯ ಟೂರ್ನಿಗಳಲ್ಲಿ ಆಡದಿರಲು ನಿರ್ಧರಿಸಿದ್ದೇನೆ’ ಎನ್ನುವ ಮೂಲಕ ವಿಶ್ವ ಚಾಂಪಿಯನ್ಷಿಪ್ ಸಿದ್ಧತೆ ನಡೆಸುವುದಕ್ಕೆ ತಮ್ಮ ಆದ್ಯತೆ ಎಂಬುದನ್ನು ಸೂಚಿಸಿದ್ದಾರೆ.

2024ರಲ್ಲಿ ಸಿಂಗಪುರದಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಗುಕೇಶ್ ವಿಶ್ವ ಚಾಂಪಿಯನ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.