ನವದೆಹಲಿ : ಮಹಿಳೆಯರ 1,500 ಮೀ. ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಕೆ.ಎಂ.ದೀಕ್ಷಾ ಅವರು ಉದ್ದೀಪನ ಮದ್ದು ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಕ್ರೀಡೆಗಳ ಬೆಳ್ಳಿ ಪದಕ ವಿಜೇತೆ ಸಹ ಆಗಿರುವ 27 ವರ್ಷ ವಯಸ್ಸಿನ ದೀಕ್ಷಾ ಈ ವರ್ಷದ ಏಪ್ರಿಲ್ನಲ್ಲಿ ಕೇವಲ ಒಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಿಷೇಧಿತ ಮದ್ದು ಸೇವನೆ ದೃಢಪಟ್ಟಿದೆ ಎಂದು ಉನ್ನತ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ. ಗ್ಲಾಸ್ಗೊದಲ್ಲಿ ನಿಗದಿಯಾಗಿರುವ 2026ರ ಕಾಮನ್ವೆಲ್ತ್ ಕ್ರೀಡೆಗಳಿಗೆ (ಜುಲೈ 23 ರಿಂದ ಆಗಸ್ಟ್ 2) ಆಯ್ಕೆ ಟ್ರಯಲ್ಸ್ ಆಗಿದ್ದ ರಾಂಚಿಯ ಫೆಡರೇಷನ್ ಕಪ್ ಕೂಟದಲ್ಲಿ ದೀಕ್ಷಾ ಭಾಗವಹಿಸಿರಲಿಲ್ಲ.

ರಾಂಚಿಯಲ್ಲಿ ನಡೆದಿದ್ದ ಫೆಡರೇಷನ್ ಕಪ್ ಅಥ್ಲೆಟಿಕ್ಸ್ನಲ್ಲಿ ಮಾನದಂಡ ತಲುಪಲುವಿಫಲರಾದ ಅಥ್ಲೀಟುಗಳಿಗೆ ಮತ್ತೊಂದು ಅವಕಾಶವಾಗಿ ಜೂನ್ 13ರಂದು ನಡೆಯಲಿರುವ ಲೂಧಿಯಾನ ಲೆಗ್ ಅನ್ನು ಅರ್ಹತಾ ಟೂರ್ನಿಯಲ್ಲಿ ಪರಿಗಣಿಸಲು ಭಾರತ ಅಥ್ಲೆಟಿಕ್ ಫೆಡರೇ ಷನ್ ನಿರ್ಧರಿಸಿದೆ. ಆದರೆ ಫೆಡರೇಷನ್ ಕಪ್ನಲ್ಲಿ ಭಾಗವಹಿಸಿದವರಿಗೆ ಮಾತ್ರ ಈ ಅವಕಾಶ ಕಲ್ಪಿಸಿದೆ.

ಏಪ್ರಿಲ್ನಲ್ಲಿ ನಡೆದಿದ್ದ ಇಂಡಿಯನ್ ಓಪನ್ ಅಥ್ಲೆಟಿಕ್ ಸರಣಿ 2ರಲ್ಲಿ ಅವರು 4ನಿ.25.74 ಸೆ.ಗಳಲ್ಲಿ ಓಟ ಕ್ರಮಿಸಿದ್ದರು. ಆದರೆ ಕಾಮನ್ವೆಲ್ತ್ ಕ್ರೀಡೆಗಳಿಗೆ ನಿಗದಿಪಡಿಸಿದ ಮಾನದಂಡ (4:05.09) ಸಾಧಿಸಿರಲಿಲ್ಲ. 2024ರ ಮೇ ತಿಂಗಳಲ್ಲಿ ಅಮೆರಿಕದಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ಅವರು 4ನಿ.04.78 ಸೆ.ಗಳಲ್ಲಿ ಓಡಿದ್ದು ದಾಖಲೆಯಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-51-1507268372

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.