ನವದೆಹಲಿ: ಸಂಘರ್ಷದಿಂದ ನಲುಗಿರುವ ಪಶ್ಚಿಮ ಏಷ್ಯಾಕ್ಕೆ ಹೊಂದಿಕೊಂಡಿರುವ ಸೈಪ್ರಸ್ನಲ್ಲಿ ಪ್ರತಿಷ್ಠಿತ ಫಿಡೆ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಇದೇ 28ರಿಂದ ನಡೆಯಬೇಕಿದೆ. ಆದರೆ ಈ ಟೂರ್ನಿಯ ತಾಣ ಬದಲಾವಣೆಯ ಸಾಧ್ಯತೆಯನ್ನು ಅಂತರರಾಷ್ಟ್ರೀಯ ಚೆಸ್ ಫೆಡರೇಷನ್ (ಫಿಡೆ) ತಳ್ಳಿಹಾಕಿದೆ.

ಭಾರತದ ತಾರೆ ಕೋನೇರು ಹಂಪಿ ಈ ಟೂರ್ನಿಯಿಂದ ಹಿಂದೆಸರಿಯುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಟೂರ್ನಿಯ ಪುರುಷರ ವಿಭಾಗದಲ್ಲಿ ವಿಜೇತರಾಗುವ ಆಟಗಾರ, ಹಾಲಿ ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರಿಗೆ ಸವಾಲು ಹಾಕುವ ಅವಕಾಶ ಪಡೆಯುತ್ತಾರೆ. ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗುವ ಆಟಗಾರ್ತಿ, ವಿಶ್ವ ಚಾಂಪಿಯನ್ ಚೀನಾದ ಜು ವೆಂಜುನ್ ಅವರಿಗೆ ಚಾಲೆಂಜರ್ ಆಗಲಿದ್ದಾರೆ.

ಈ ತಿಂಗಳ ಆರಂಭದಲ್ಲಿ ಸೈಪ್ರಸ್ನಲ್ಲಿರುವ ಬ್ರಿಟಿಷ್ ವಾಯುನೆಲೆಯ ಮೇಲೆ ಡ್ರೋನ್ ದಾಳಿ ನಡೆದಿತ್ತು. ಸೈಪ್ರಸ್ ದೇಶವು ಮೆಡಿಟರೇನಿಯನ್ ಸಾಗರದಲ್ಲಿ ಮೂರನೇ ಅತಿ ದೊಡ್ಡ ದ್ವೀಪವಾಗಿದೆ.

‘ನಮ್ಮ ಯೋಜನೆಗಳು ಬದಲಾಗಿಲ್ಲ. ನಾವು ಕ್ಯಾಂಡಿಡೇಟ್ಸ್ ಟೂರ್ನಿಯ ಅಂತಿಮ ಸಿದ್ಧತೆಯಲ್ಲಿದ್ದೇವೆ. ಸೈಪ್ರಸ್ ಯುದ್ಧಕೇಂದ್ರವಾದ ಇರಾನ್, ಕೊಲ್ಲಿ ರಾಷ್ಟ್ರಗಳಿಂದ ದೂರ ಇಲ್ಲ ನಿಜ, ಆದರೆ ಈ ದೇಶ ಯಾವುದೇ ರೀತಿ ಯುದ್ಧದಲ್ಲಿ ಭಾಗಿಯಾಗಿಲ್ಲ. ಇಲ್ಲಿ ಅಪಾಯದ ಸಾಧ್ಯತೆ ಕ್ಷೀಣವಾಗಿದೆ’ ಎಂದು ಫಿಡೆ ಸಿಇಒ ಎಮಿಲ್ ಸುತ್ತೋವ್ಸ್ಕಿ ‘ಚೆಸ್ಬೇಸ್’ ವೆಬ್ಸೈಟ್ಗೆ ತಿಳಿಸಿದ್ದಾರೆ.

ಪುರುಷರ ವಿಭಾಗದ ಎಂಟು ಮಂದಿಯಲ್ಲಿ ಆರ್.ಪ್ರಜ್ಞಾನಂದ ಕಣದಲ್ಲಿರುವ ಭಾರತದ ಏಕೈಕ ಆಟಗಾರ ಎನಿಸಿದ್ದಾರೆ. ಮಹಿಳೆಯರ ವಿಭಾಗದಲ್ಲಿ ವಿಶ್ವಕಪ್ ಚಾಂಪಿಯನ್ ದಿವ್ಯಾ ದೇಶಮುಖ್, ಹಂಪಿ ಮತ್ತು ಆರ್.ವೈಶಾಲಿ ಅವರು ಭಾಗವಹಿಸುವ ಅವಕಾಶ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.