ಹೈದರಾಬಾದ್: ಭಾರತ ಮಹಿಳಾ ಹಾಕಿ ತಂಡವು ಎಫ್ಐಎಚ್ ಹಾಕಿ ವಿಶ್ವಕಪ್ ಕ್ವಾಲಿಫೈಯರ್ಸ್ ಪಂದ್ಯದಲ್ಲಿ ಸೋಮವಾರ ಸ್ಕಾಟ್ಲೆಂಡ್ ಜೊತೆ 2–2 ಸಮಬಲ ಸಾಧಿಸಿತು.

ಪಂದ್ಯದ 6ನೇ ನಿಮಿಷದಲ್ಲಿ ಗೋಲು ಗಳಿಸಿದ ಹೀಥರ್ ಮೆಕ್ಇವಾನ್ ಸ್ಕಾಟ್ಲೆಂಡ್ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಭಾರತದ ನವನೀತ್ ಕೌರ್ 18ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲನ್ನಾಗಿ ಪರಿವರ್ತಿಸಿ, ಸಮಬಲ ಸಾಧಿಸಿದರು. ಸುನೆಲಿತಾ ಟೊಪ್ಪೊ (29ನೇ ನಿ.) ಗೋಲು ಗಳಿಸಿ, ಆತಿಥೇಯರಿಗೆ ಮುನ್ನಡೆ ತಂದುಕೊಟ್ಟರು. ಆದರೆ, ನಾಲ್ಕೇ ನಿಮಿಷಗಳ ಅಂತರದಲ್ಲಿ ಪ್ರವಾಸಿ ತಂಡದ ಫಿಯೋನಾ ಬರ್ನೆಟ್ (33ನೇ ನಿ.) ಗೋಲು ಹೊಡೆದು 2–2 ಡ್ರಾ ಸಾಧಿಸಿದರು.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅವರು ಕ್ರೀಡಾಂಗಣದಲ್ಲಿ ಹಾಜರಿದ್ದು ಪಂದ್ಯವನ್ನು ವೀಕ್ಷಿಸಿದರು.

ಮೊದಲ ಪಂದ್ಯದಲ್ಲಿ ಉರುಗ್ವೆ ವಿರುದ್ಧ ಗೆಲುವು ಸಾಧಿಸಿದ್ದ ಸಲೀಮಾ ಟೇಟೆ ಪಡೆಯು ನಾಲ್ಕು ಅಂಕಗಳೊಂದಿಗೆ ಬಿ ಗುಂಪಿನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿತು. ಸ್ಕಾಟ್ಲೆಂಡ್ ತಂಡವೂ ಇಷ್ಟೇ ಅಂಕ ಹೊಂದಿದೆಯಾದರೂ, ಗೋಲು ಗಳಿಕೆಯಲ್ಲಿ ಹಿಂದಿರುವ ಕಾರಣ ಎರಡನೇ ಸ್ಥಾನದಲ್ಲಿದೆ.

ಬಿ ಗುಂಪಿನ ಇನ್ನೊಂದು ಪಂದ್ಯದಲ್ಲಿ ಉರುಗ್ವೆ ತಂಡವು 3–2ರಿಂದ ವೇಲ್ಸ್ ತಂಡವನ್ನು ಸೋಲಿಸಿತು. ಎ ಗುಂಪಿನ ಪಂದ್ಯಗಳಲ್ಲಿ ಇಟಲಿ 3–0ಯಿಂದ ಆಸ್ಟ್ರಿಯಾ ವಿರುದ್ಧ ಹಾಗೂ ಇಂಗ್ಲೆಂಡ್ ತಂಡವು ಇಷ್ಟೇ ಅಂತರದಲ್ಲಿ ಜಪಾನ್ ತಂಡದ ವಿರುದ್ಧ ಜಯ ಸಾಧಿಸಿದವು.

ಭಾರತ ತಂಡವು ಬುಧವಾರ ನಡೆಯಲಿರುವ ಮುಂದಿನ ಪಂದ್ಯದಲ್ಲಿ ವೇಲ್ಸ್ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.