ಹೈದರಾಬಾದ್: ಇಂಗ್ಲೆಂಡ್ ತಂಡ, ಎಫ್ಐಎಚ್ ಮಹಿಳಾ ಹಾಕಿ ವಿಶ್ವ ಕಪ್ ಅರ್ಹತಾ ಟೂರ್ನಿಯ ಫೈನಲ್ನಲ್ಲಿ ಶನಿವಾರ ಆತಿಥೇಯ ಭಾರತ ತಂಡವನ್ನು 2–0 ಗೋಲುಗಳಿಂದ ಸೋಲಿಸಿತು. ಈ ಸೋಲಿನ ಹೊರತಾಗಿಯೂ ಭಾರತ ವಿಶ್ವಕಪ್ಗೆ ಅರ್ಹತೆ ಪಡೆಯಿತು.

ಎಫ್ಐಎಚ್ ನಿಯಮದ ಪ್ರಕಾರ ಅರ್ಹತಾ ಟೂರ್ನಿಯಲ್ಲಿ ಮೊದಲ ಮೂರು ಸ್ಥಾನ ಪಡೆದ ತಂಡಗಳು ಅರ್ಹತೆ ಸಂಪಾದಿಸುತ್ತವೆ. ಹೀಗಾಗಿ ಚಾಂಪಿಯನ್ ಇಂಗ್ಲೆಂಡ್, ರನ್ನರ್ ಅಪ್ ಭಾರತ ತಂಡದ ಜೊತೆ ಮೂರನೇ ಸ್ಥಾನ ಪಡೆದ ಸ್ಕಾಟ್ಲೆಂಡ್ ತಂಡಗಳು ವಿಶ್ವಕಪ್ಗೆ ಅರ್ಹತೆ ಪಡೆದವು.

ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್ ಜಂಟಿ ಆಶ್ರಯದಲ್ಲಿ ವಾವ್ರೆ ಮತ್ತು ಆಮ್ಸ್ಟಲ್ವೀನ್ನಲ್ಲಿ ಆಗಸ್ಟ್ 14 ರಿಂದ 30ರವರೆಗೆ ವಿಶ್ವಕಪ್ ಟೂರ್ನಿ ನಡೆಯಲಿದೆ. ಈ ಬಾರಿ ಪುರುಷರ ಟೂರ್ನಿಯ ವೇಳೆಯೇ ಮಹಿಳಾ ಟೂರ್ನಿಯನ್ನೂ ಹಮ್ಮಿಕೊಳ್ಳಲಾಗಿದೆ.

ಜಿಎಂಸಿ ಬಾಲಯೋಗಿ ಹಾಕಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಗ್ರೇಸ್ ಬಾಲ್ಸ್ಡನ್ 13ನೇ ನಿಮಿಷ ಪೆನಾಲ್ಟಿ ಕಾರ್ನರ್ ಮೂಲಕ ಮುನ್ನಡೆ ಒದಗಿಸಿದರು. ಎಲಿಝಬೆತ್ ನೀಲ್ 43ನೇ ನಿಮಿಷ ಫೀಲ್ಡ್ ಗೋಲಿನ ಗಳಿಸಿ ಇಂಗ್ಲೆಂಡ್ ತಂಡದ ಮುನ್ನಡೆಯನ್ನು ಹೆಚ್ಚಿಸಿದರು.

ಒಂಬತ್ತನೇ ಕ್ರಮಾಂಕದಲ್ಲಿರುವ ಭಾರತ ತಂಡ ಎಲ್ಲ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸಿದರೂ, ಆರನೇ ಸ್ಥಾನದಲ್ಲಿರುವ ಇಂಗ್ಲೆಂಡ್ನ ಪ್ರಬಲ ರಕ್ಷಣಾ ಕೋಟೆ ಭೇದಿಸಲು ಸಾಧ್ಯವಾಗಲಿಲ್ಲ.

ಸ್ಕಾಟ್ಲೆಂಡ್ಗೆ ಜಯ:

ಇದಕ್ಕೆ ಮೊದಲು, ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ 1–0 ಯಿಂದ ಇಟಲಿ ತಂಡವನ್ನು ಸೋಲಿಸಿತ್ತು. ಆ್ಯಮಿ ಕೊಸ್ಟೆಲ್ಲೊ ಪಂದ್ಯದ ನಿರ್ಣಾಯಕ ಗೋಲು ಗಳಿಸಿದರು.

ಸ್ಯಾಂಟಿಯಾಗೊದಲ್ಲಿ ಈ ವಾರದ ಆರಂಭದಲ್ಲಿ ಮುಕ್ತಾಯಗೊಂಡ ಅರ್ಹತಾ ಟೂರ್ನಿಯ ಇನ್ನೊಂದು ಲೆಗ್ನಲ್ಲಿ ಆತಿಥೇಯ ಚಿಲಿ, ಆಸ್ಟ್ರೇಲಿಯಾ ಮತ್ತು ಐರ್ಲೆಂಡ್ ತಂಡಗಳು ವಿಶ್ವಕಪ್ಗೆ ಟಿಕೆಟ್ ಕಾದಿರಿಸಿದ್ದವು. ಈ ಟೂರ್ನಿಯಲ್ಲಿ ನಾಲ್ಕನೇ ಸ್ಥಾನ ಪಡೆದ ಜಪಾನ್ ಸಹ ಉನ್ನತ ಕ್ರಮಾಂಕದ ತಂಡಕ್ಕೆ ಇರುವ ಕೋಟಾದ ಮೂಲಕ ವಿಶ್ವಕಪ್ಗೆ ಅರ್ಹತೆ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.