ಹೈದರಾಬಾದ್ (ಪಿಟಿಐ): ಹಾಕಿ ವಿಶ್ವಕಪ್ಗೆ ಈಗಾಗಲೇ ಟಿಕೆಟ್ ಖಚಿತಪಡಿಸಿಕೊಂಡಿರುವ ಭಾರತ ತಂಡ ಈಗ ಎಫ್ಐಎಚ್ ಮಹಿಳಾ ಹಾಕಿ ವಿಶ್ವಕಪ್ ಅರ್ಹತಾ ಟೂರ್ನಿಯ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದೆ. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಶುಕ್ರವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ಇಟಲಿ ತಂಡವನ್ನು ಎದುರಿಸಲಿದೆ.

ಭಾರತ ವನಿತೆಯರು ‘ಬಿ’ ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳಿಂದ ಏಳು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಸ್ಕಾಟ್ಲೆಂಡ್ ತಂಡ ಸಹ ಇಷ್ಟೇ ಅಂಕಗಳನ್ನು ಕಲೆಹಾಕಿದೆ. ಆದರೆ ಗೋಲು ವ್ಯತ್ಯಾಸದ ಆಧಾರದಲ್ಲಿ ಭಾರತ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಗುಂಪು ಹಂತದಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದು, ಒಂದನ್ನು ಡ್ರಾ ಮಾಡಿಕೊಂಡಿತ್ತು.

ಇಟಲಿ ತಂಡವು ‘ಎ’ ಗುಂಪಿನಲ್ಲಿ ನಾಲ್ಕು ಪಾಯಿಂಟ್ಗಳೊಡನೆ (ಒಂದು ಗೆಲುವು, ಒಂದು ಡ್ರಾ, ಒಂದು ಸೋಲು) ಎರಡನೇ ಸ್ಥಾನ ಗಳಿಸಿದೆ.

ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತವು ವೇಲ್ಸ್ ವಿರುದ್ಧ ಜಯಗಳಿಸಿದ್ದು, ನವನೀತ್ ಕೌರ್ ಅವರ ಹ್ಯಾಟ್ರಿಕ್ ಗೋಲುಗಳ ಆಟ ಗಮನಸೆಳೆದಿತ್ತು. ಅವರು ನಾಲ್ಕು ಗೋಲುಗಳೊಡನೆ ಟೂರ್ನಿಯ ಜಂಟಿ ಗರಿಷ್ಠ ಸ್ಕೋರರ್ ಎನಿಸಿದ್ದಾರೆ.

ಇಟಲಿ ತಂಡವು, ಫೆಡೆರಿಕಾ ಕಾರ್ಟಾ ಅವರಿಂದ ಉತ್ತಮ ಆಟದ ನಿರೀಕ್ಷೆಯಲ್ಲಿದೆ. ಅವರು ತಂಡದ ದಾಳಿ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಇದುವರೆಗೆ ಮೂರು ಗೋಲುಗಳನ್ನು ಗಳಿಸಿದ್ದಾರೆ.

ಮೇಲ್ನೋಟಕ್ಕೆ ಆತಿಥೇಯ ಭಾರತವೇ ಪಂದ್ಯ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಉಭಯ ತಂಡಗಳು 2012ರಿಂದ ಈಚೆಗೆ ಏಳು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಐದು ಬಾರಿ ಜಯಗಳಿಸಿದೆ. ಇಟಲಿ ಒಮ್ಮೆ ಜಯಗಳಿಸಿದ್ದು, ಉಳಿದ ಒಂದು ಪಂದ್ಯ ಡ್ರಾ ಆಗಿದೆ. ಈ ಅಂಶವೂ ಆತಿಥೇಯ ತಂಡದ ವಿಶ್ವಾಸ ಹೆಚ್ಚಿಸಲು ನೆರವಾಗಲಿದೆ.

2026ರ ವಿಶ್ವಕಪ್ಗೆ ಈಗಾಗಲೇ ಅರ್ಹತೆ ಖಚಿತಪಡಿಸಿರುವುದು ಭಾರತ ತಂಡಕ್ಕೆ ಸಾಧನೆಯ ದೃಷ್ಟಿಯಿಂದ ಮಹತ್ವದ ಮೈಲಿಗಲ್ಲು ಎಂದು ಮುಖ್ಯ ತರಬೇತುದಾರ ಸ್ಯೋರ್ಡ್ ಮರಿನ್ ಬಣ್ಣಿಸಿದ್ದಾರೆ. ಈ ಟೂರ್ನಿಯಲ್ಲಿ ಆಡಿದ ರೀತಿ ನೋಡಿದರೆ ಅವರು ಎಲ್ಲಾ ರೀತಿಯಿಂದಲೂ ಮೆಚ್ಚುಗೆಗೆ ಅರ್ಹರು ಎಂದೂ ಹೇಳಿದ್ದಾರೆ.

‘ಆಟಗಾರ್ತಿಯರು ಶಿಸ್ತುಬದ್ಧ ಆಟದ ಜೊತೆಗೆ ಏಕಾಗ್ರತೆ ಮತ್ತು ಗುಂಪು ಹಂತದ ಪಂದ್ಯಗಳಲ್ಲಿ ಆಕ್ರಮಣಕಾರಿ ಆಟದ ಮನೋಭಾವ ಪ್ರದರ್ಶಿಸಿದ್ದಾರೆ’ ಎಂದಿದ್ದಾರೆ.

ಆದರೆ ಇಟಲಿ ತಂಡವನ್ನು ಲಘುವಾಗಿ ತೆಗೆದುಕೊಳ್ಳದಿರುವಂತೆ ತಮ್ಮ ತಂಡದ ಆಟಗಾರ್ತಿಯರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ. ‘ಇಟಲಿ ತಂಡವು ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ. ಆ ಗುಣವನ್ನು ಈ ಟೂರ್ನಿಯಲ್ಲಿ ತೋರಿಸಿದೆ. ನಮ್ಮ ಗಮನ ತಂತ್ರಗಾರಿಕೆಗಳನ್ನು ಕಾರ್ಯಗತಗೊಳಿಸುವತ್ತ ಇರಬೇಕು. ಲೀಗ್ನಲ್ಲಿ ತೋರಿದ ಉತ್ಸಾಹ ಮತ್ತು ವಿಶ್ವಾಸದಿಂದ ಆಡಬೇಕು’ ಎಂದು ಮರಿನ್ ಕಿವಿಮಾತು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.