ಚೆನ್ನೈ: ಇಂಗ್ಲೆಂಡ್ನ ಮಾಜಿ ವಿಕೆಟ್ಕೀಪರ್- ಬ್ಯಾಟರ್ ಜೇಮ್ಸ್ ಫೋಸ್ಟರ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಸೋಮವಾರ ನೇಮಕಗೊಂಡಿದ್ದಾರೆ.

ನ್ಯೂಜಿಲೆಂಡ್ನ ಸ್ಟೀಫನ್ ಫ್ಲೆಮಿಂಗ್ ನೇತೃತ್ವದ ಕೋಚಿಂಗ್ ಸಿಬ್ಬಂದಿ ತಂಡವನ್ನು ಫೋಸ್ಟರ್ ಸೇರಿಕೊಳ್ಳಲಿದ್ದಾರೆ. ಮೈಕೆಲ್ ಹಸ್ಸಿ ಬ್ಯಾಟಿಂಗ್ ಕೋಚ್ ಆಗಿ ಮತ್ತು ಎರಿಕ್ ಸಿಮನ್ಸ್ ಅವರು ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

45 ವರ್ಷದ ಫೋಸ್ಟರ್ ಅವರು 2001ರಿಂದ 2009ರ ನಡುವೆ ಏಳು ಟೆಸ್ಟ್, 11 ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಇಂಗ್ಲೆಂಡ್ ತಂಡಕ್ಕೆ ಆಡಿದ್ದಾರೆ.

ಫೋಸ್ಟರ್ ಅವರು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳೊಂದಿಗೆ ಕೋಚಿಂಗ್ ಸದಸ್ಯರಾಗಿಗೂ ಕೆಲಸ ಮಾಡಿದ್ದಾರೆ. ಪ್ರಸ್ತುತ ‘ದಿ ಹಂಡ್ರೆಡ್’ನಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡಕ್ಕೆ ಸಹಾಯಕ ಕೋಚ್ ಆಗಿದ್ದಾರೆ.

ಮಾರ್ಚ್ 30ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧದ ಚೆನ್ನೈ ತಂಡವು ಹಾಲಿ ಋತುವಿನ ಅಭಿಯಾನ ಪ್ರಾರಂಭಿಸಲಿದೆ. ಏಪ್ರಿಲ್ 3ರಂದು ಪಂಜಾಬ್ ಕಿಂಗ್ಸ್ ವಿರುದ್ಧ ತವರಿನಲ್ಲಿ ಕಣಕ್ಕಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.