ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಸ್ತಿ: ನಾಲ್ವರಿಗೆ ಚಿನ್ನದ ಪದಕ

Published 23 ಆಗಸ್ಟ್ 2024, 16:32 IST
Last Updated 23 ಆಗಸ್ಟ್ 2024, 16:32 IST
ಅಕ್ಷರ ಗಾತ್ರ

ಅಮ್ಮಾನ್ (ಜೋರ್ಡಾನ್‌): ಭಾರತದ ಅದಿತಿ ಕುಮಾರಿ, ನೇಹಾ, ಪುಲ್ಕಿತ್ ಮತ್ತು ಮಾನ್ಸಿ ಲಾಥರ್ ಅವರು ಗುರುವಾರ ವಿಶ್ವ 17 ವರ್ಷದೊಳಗಿನವರ ಕುಸ್ತಿ ಚಾಂಪಿಯನ್‌ಷಿಪ್‌ನ ತಮ್ಮ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡರು.

43 ಕೆಜಿ ವಿಭಾಗದಲ್ಲಿ ಅದಿತಿ 7–0ಯಿಂದ ಗ್ರೀಸ್‌ನ ಮರಿಯಾ ಲೂಯಿಜಾ ಜಿಕಿಕಾ ಅವರನ್ನು ಮಣಿಸಿದರು. 57 ಕೆಜಿ ವಿಭಾಗದಲ್ಲಿ ನೇಹಾ ಅವರು ಜಪಾನ್‌ನ ಸೋ ಟ್ಸುಟ್ಸುಯಿ ಅವರನ್ನು ಸೋಲಿಸಿದರು.

65 ಕೆಜಿ ವಿಭಾಗದಲ್ಲಿ ಪುಲ್ಕಿತ್ 6–3ರಿಂದ ಡೇರಿಯಾ ಫ್ರೋಲೋವಾ ವಿರುದ್ಧ ಗೆಲುವು ಸಾಧಿಸಿದರು. 73 ಕೆಜಿ ವಿಭಾಗದಲ್ಲಿ ಮಾನ್ಸಿ 5-0ಯಿಂದ ಹನ್ನಾ ಪಿರ್ಸ್ಕಯಾ ಅವರನ್ನು ಮಣಿಸಿದರು.

ಗ್ರೀಕೋ ರೋಮನ್ ಶೈಲಿಯಲ್ಲಿ ಭಾರತ ಎರಡು ಕಂಚಿನ ಪದಕಗಳನ್ನು ಈ ಮೊದಲೇ ಗೆದ್ದುಕೊಂಡಿತ್ತು. ರೋನಕ್ ದಹಿಯಾ ಮತ್ತು ಸಾಯಿನಾಥ್ ಪಾರ್ಧಿ ಕಂಚು ಗೆದ್ದಿದ್ದರು.

ಶುಕ್ರವಾರ ನಿರಾಸೆ: ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಕುಸ್ತಿಪಟುಗಳು ಶುಕ್ರವಾರ ನಿರಾಸೆ ಅನುಭವಿಸಿದರು. ಐದು ಸ್ಪರ್ಧೆಗಳಲ್ಲಿ ಯಾರಿಗೂ ಸೆಮಿಫೈನಲ್‌ ತಲುಪಲು ಸಾಧ್ಯವಾಗಲಿಲ್ಲ.

ಹರ್ಷ್ ಮತ್ತು ವಿವೇಕ್ ಅವರು ತಮ್ಮ ವಿಭಾಗದಲ್ಲಿ ಒಂದು ಸುತ್ತು ಗೆಲ್ಲಲಷ್ಟೇ ಶಕ್ತವಾದರು. ಹರ್ಷ್ (48 ಕೆಜಿ) 6-2ರಿಂದ  ಎರ್ಬೋಲ್ ಬೊಲೊಟೊವ್ ವಿರುದ್ಧ ಶುಭಾರಂಭ ಮಾಡಿದ್ದರು. ಆದರೆ, ಕ್ವಾರ್ಟರ್ ಫೈನಲ್‌ನಲ್ಲಿ ಚಿಂಗಿಸ್ ಸರಿಗ್ಲಾರ್ ಅವರಿಗೆ ಮಣಿದರು.

ವಿವೇಕ್‌ 11-4 ಅಂತರರಿಂದ ಅಲಿಯಾಕ್ಸೆಯ್ ಕುರಿಲಾ ವಿರುದ್ಧ ಆರಂಭಿಕ ಸುತ್ತಿನಲ್ಲಿ ಗೆಲುವು ಸಾಧಿಸಿದರು. ಆದರೆ, ಕ್ವಾರ್ಟರ್‌ ಫೈನಲ್‌ನಲ್ಲಿ ನಿಕೊಲೊಜ್ ಮೈಸುರಾಡ್ಜೆ ಅವರಿಗೆ ಮಣಿದರು.

55 ಕೆಜಿ ವಿಭಾಗದಲ್ಲಿ ಜೈವೀರ್ ಸಿಂಗ್ ಮೊದಲ ಸುತ್ತಿನಲ್ಲೇ ಅಜಾತ್‌ಬರ್ಡಿ ಅಶಿರ್ಗುಲ್ಯೆವ್‌ ಅವರಿಗೆ ಶರಣಾದರು. 65 ಕೆಜಿಯ ಸ್ಪರ್ಧೆಯಲ್ಲಿ ಸಾಗರ್ ಅವರು 5-7 ರಿಂದ ಬಕ್‌ಡೌಲೆಟ್ ಅಕಿಮ್ಜಾನ್ ವಿರುದ್ಧ ಸೋತರು. 110 ಕೆಜಿ ವಿಭಾಗದಲ್ಲಿ ಜಸ್‌ಪೂರನ್ ಸಿಂಗ್ ಅವರು ಕಜಕಸ್ತಾನದ ಯೆಡಿಗೆ ಕಾಸಿಂಬೆಕ್ ವಿರುದ್ಧ ‍ಪರಾಭವಗೊಂಡರು.

ಮಹಿಳೆಯರ ವಿಭಾಗದಲ್ಲಿ ಕಾಜಲ್ (69 ಕೆಜಿ) ಮತ್ತು ಶ್ರುತಿಕಾ ಶಿವಾಜಿ ಪಾಟೀಲ್ (46 ಕೆಜಿ) ಅವರು ಚಿನ್ನದ ಪದಕದ ಸ್ಪರ್ಧೆಯಲ್ಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT