ವಾರ್ಸಾ (ಪಿಟಿಐ): ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರು ಸೂಪರ್ ರ್ಯಾಪಿಡ್ ಮತ್ತು ಬ್ಲಿಟ್ಝ್ ಚೆಸ್ ಟೂರ್ನಿಯಲ್ಲಿ ಆರನೇ ಸ್ಥಾನ ಗಳಿಸಲಷ್ಟೇ ಶಕ್ತರಾದರು. ಅಮೆರಿಕದ ಹ್ಯಾನ್ಸ್ ಮೋಕ್ ನೀಮನ್ ಅವರು ಒಟ್ಟು 22.5 ಪಾಯಿಂಟ್ಸ್ ಕಲೆಹಾಕಿ ಚಾಂಪಿಯನ್ ಕಿರೀಟ ಧರಿಸಿದರು.

ಟ್ರೊಫಿಯ ಜೊತೆ ಸುಮಾರು ₹47 ಲಕ್ಷ ಬಹುಮಾನ ಹಣ ನೀಮನ್ ಪಾಲಾಯಿತು. ಅಮೆರಿಕದ ಫ್ಯಾಬಿಯಾನೊ ಕರುವಾನ (22 ಪಾಯಿಂಟ್ಸ್), ವೆಸ್ಲಿ ಸೋ (21), ಸ್ಲೊವೇನಿಯಾದ ವ್ಲಾದಿಮಿರ್ ಫೆಡೊಸೀವ್ (18), ಫ್ರಾನ್ಸ್ನ ಅಲಿರೇಜಾ ಫಿರೋಝ್ (17.5) ಕ್ರಮವಾಗಿ ಎರಡರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.

ಗ್ರ್ಯಾಂಡ್ಚೆಸ್ ಟೂರ್ನ ಭಾಗವಾದ ಈ ಟೂರ್ನಿಯಲ್ಲಿ ಗುಕೇಶ್ ಸಂಭವನೀಯ 36ರಲ್ಲಿ 17 ಪಾಯಿಂಟ್ಸ್ ಗಳಿಸಿದರು. ಈ ಟೂರ್ನಿಯಲ್ಲಿ ರ್ಯಾಪಿಡ್ ಪಂದ್ಯದ ಗೆಲುವಿಗೆ 2 ಮತ್ತು ಬ್ಲಿಟ್ಝ್ ಆಟದ ಗೆಲುವಿಗೆ ಒಂದು ಪಾಯಿಂಟ್ ನೀಡಲಾಗುತ್ತದೆ. ಪ್ರತಿಯೊಬ್ಬ ಆಟಗಾರ 9 ರ್ಯಾಪಿಡ್ ಮತ್ತು 18 ಬ್ಲಿಟ್ಝ್ ಆಟಗಳನ್ನು ಆಡಬೇಕಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-51-2121364780

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.