ಪ್ರಾಗ್ (ಝೆಕ್ ರಿಪಬ್ಲಿಕ್): ವಿಶ್ವ ಚಾಂಪಿಯನ್ ಡಿ.ಗುಕೇಶ್ ಅವರಿಗೆ ಪ್ರಾಗ್ ಅಂತರರಾಷ್ಟ್ರೀಯ ಚೆಸ್ ಟೂರ್ನಿಯ ಏಳನೇ ಸುತ್ತಿನಲ್ಲೂ ಗೆಲುವು ಒಲಿಯಲಿಲ್ಲ. ಗುರುವಾರ ನಡೆದ ಪಂದ್ಯದಲ್ಲಿ ಅವರು ಇರಾನಿನ ಪರ್ಹಾಮ್ ಮಘಸೂಡ್ಲು ಜೊತೆ ಪಾಯಿಂಟ್ ಹಂಚಿಕೊಳ್ಳಬೇಕಾಯಿತು.

ಇದು ಗುಕೇಶ್ ಅವರಿಗೆ ನಾಲ್ಕನೇ ಡ್ರಾ. ಮೂರು ಪಂದ್ಯ ಸೋತಿರುವ ಅವರು ಒಟ್ಟು ಎರಡು ಅಂಕಗಳನ್ನು ಗಳಿಸಿದ್ದು ಕೊನೆಯ ಸ್ಥಾನದಲ್ಲಿದ್ದಾರೆ. ಈ ಟೂರ್ನಿಯಲ್ಲಿ ಒಟ್ಟು 10 ಆಟಗಾರರು ಭಾಗವಹಿಸಿದ್ದು, ಎರಡು ಸುತ್ತುಗಳಷ್ಟೇ ಬಾಕಿ ಉಳಿದಿವೆ.

ದಿನದ ಐದು ಪಂದ್ಯಗಳಲ್ಲಿ ಒಂದರಲ್ಲಷ್ಟೇ ಸೋಲು–ಗೆಲುವು ನಿರ್ಧಾರವಾಯಿತು. ಉಳಿದ ನಾಲ್ಕು ಪಂದ್ಯಗಳು ಡ್ರಾ ಆದವು. ಜರ್ಮನಿಯ ವಿನ್ಸೆಂಟ್ ಕೀಮರ್ (3.5 ಅಂಕ) ಅವರು ಸ್ಪೇನ್ನ ಡೇವಿಡ್ ಗಿಜಾರೊ (3.5) ಅವರನ್ನು ಸೋಲಿಸಿದರು.

ಕಳೆದ ಬಾರಿಯ ಚಾಂಪಿಯನ್ ಅರವಿಂದ ಚಿದಂಬರಮ್ (3 ಅಂಕ) ಅವರು ಉಜ್ಬೇಕಿಸ್ತಾನದ ನಾದಿರ್ಬೆಕ್ ಯಾಕುಬೊಯೆವ್ (3) ಜೊತೆ ಡ್ರಾ ಮಾಡಿಕೊಂಡರು. ಮತ್ತೊಬ್ಬ ಉಜ್ಬೇಕ್ ಆಟಗಾರ ನಾದಿರ್ಬೆಕ್ ಅಬ್ದುಸತ್ತಾರೋವ್ ಜೊತೆ ಡ್ರಾ ಮಾಡಿಕೊಂಡ ಡಚ್ ಗ್ರ್ಯಾಂಡ್ಮಾಸ್ಟರ್ ಜೋರ್ಡಾನ್ ವಾನ್ ಫೊರೀಸ್ಟ್ (5 ಅಂಕ) ಅವರು ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ಅಬ್ದುಸತ್ತಾರೋವ್ ಮತ್ತು ಝೆಕ್ ರಿಪಬ್ಲಿಕ್ನ ಡೇವಿಡ್ ನವಾರ ಅವರು ತಲಾ 4.5 ಅಂಕ ಸಂಗ್ರಹಿಸಿದ್ದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.

ಚಾಲೆಂಜರ್ಸ್ ವಿಭಾಗದಲ್ಲಿ ಸೂರ್ಯಶೇಖರ ಗಂಗೂಲಿ ಅವರು ಏಳನೇ ಸುತ್ತಿನಲ್ಲಿ ಚೀನಾದ ಜಿನೆರ್ ಝು (2 ಅಂಕ) ಅವರನ್ನು ಸೋಲಿಸಿ ಟೂರ್ನಿಯಲ್ಲಿ ತಮ್ಮ ಮೊದಲ ಗೆಲುವು ದಾಖಲಿಸಿದರು.

ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್ (3.5 ಅಂಕ) ಅವರು ಡೆನ್ಮಾರ್ಕ್ನ ಯೊನಾಸ್ ಜೆರಿ ಬುಹ್ಲ್ (3.5) ಅವರ ಜೊತೆ ಡ್ರಾ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.