ಪ್ರಾಗ್: ಸಿದ್ಧಾಂತಕ್ಕೆ ಅನುಗುಣವಾಗಿ ಆಡಿದ ಹಾಲಿ ಚಾಂಪಿಯನ್ ಅರವಿಂದ ಚಿದಂಬರಮ್ ಪ್ರಾಗ್ ಚೆಸ್ ಫೆಸ್ಟಿವಲ್ ಆರನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್, ಸ್ವದೇಶದ ಡಿ. ಗುಕೇಶ್ ಅವರನ್ನು ಸೋಲಿಸಿದರು.

ಸತತ ಹಿನ್ನಡೆಯಿಂದಾಗಿ ಗುಕೇಶ್ ಅವರು ಲೈವ್ ರೇಟಿಂಗ್ನಲ್ಲಿ ವಿಶ್ವದಲ್ಲಿ 20ನೇ ಸ್ಥಾನಕ್ಕೆ ಇಳಿದಿದ್ದಾರೆ. 2024ರ ಡಿಸೆಂಬರ್ನಲ್ಲಿ ವಿಶ್ವ ಚಾಂಪಿಯನ್ ಆದ ನಂತರ ಅವರು ಪರದಾಡುತ್ತಿರುವುದು ಈ ಟೂರ್ನಿಯಲ್ಲಿ ಎದ್ದುಕಂಡಿದೆ. ಅವರು ಆರು ಸುತ್ತುಗಳಲ್ಲಿ ಒಂದನ್ನೂ ಗೆಲ್ಲುವಲ್ಲಿ ಯಶಸ್ವಿಯಾಗಿಲ್ಲ. ಮೂರು ಪಂದ್ಯಗಳನ್ನು ಸೋತರೆ, ಉಳಿದ ಮೂರು ಡ್ರಾ ಆಗಿವೆ.

2025ರ ಟಾಟಾ ಸ್ಟೀಲ್ ಮಾಸ್ಟರ್ಸ್ ಟೂರ್ನಿಯಲ್ಲಿ ಅವರು ಅಗ್ರಸ್ಥಾನಕ್ಕೆ ಸ್ವದೇಶದ ಪ್ರಜ್ಞಾನಂದ ಜೊತೆ ಟೈ ಮಾಡಿಕೊಂಡಿದ್ದು ಮಾತ್ರ ಈ ಅವಧಿಯಲ್ಲಿ ಉತ್ತಮ ಸಾಧನೆಯೆನಿಸಿದೆ. ಇತ್ತೀಚಿನ ಟೂರ್ನಿಗಳಲ್ಲಿ ಸತತ ಹಿನ್ನಡೆಯಿಂದ ಅವರು ರೇಟಿಂಗ್ನಲ್ಲಿ 50 ಪಾಯಿಂಟ್ಸ್ ಕಳೆದುಕೊಂಡಿದ್ದಾರೆ.

ಅರವಿಂದ್ ವಿರುದ್ಧ 40ನೇ ನಡೆಯಲ್ಲಿ ಗುಕೇಶ್, ಕ್ಲಾಕ್ನಲ್ಲಿ ಕೆಲವೇ ಸೆಕೆಂಡುಗಳಿದ್ದಾಗ ನಿರ್ಣಾಯಕ ತಪ್ಪು ಎಸಗಿದರು. ಎಂಟು ನಡೆಗಳ ನಂತರ ಅವರು ಆಟ ಬಿಟ್ಟುಕೊಡಬೇಕಾಯಿತು. ಈ ಸೋಲಿನಿಂದ ಅವರು 1.5 ಅಂಕಗಳೊಡನೆ ಕೊನೆಯ ಸ್ಥಾನಕ್ಕಿಳಿದರು. ಅರವಿಂದ್ 2.5 ಅಂಕ ಗಳಿಸಿದ್ದಾರೆ.

ಈ ಸುತ್ತಿನ ಇತರ ನಾಲ್ಕೂ ಪಂದ್ಯಗಳು ಡ್ರಾ ಆದವು. ಡಚ್ ಗ್ರ್ಯಾಂಡ್ಮಾಸ್ಟರ್ ಜೋರ್ಡನ್ ವ್ಯಾನ್ ಫೊರೀಸ್ಟ್ (4.5) ಅವರು ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ. ಅವರು ಸ್ಥಳೀಯ ಆಟಗಾರ ಡೇವಿಡ್ ನವಾರ (4) ಜೊತೆ ಡ್ರಾ ಮಾಡಿಕೊಂಡರು. ಸ್ಪೇನ್ನ ಡೇವಿಡ್ ಆ್ಯಂಟನ್ ಗಿಝಾರೊ (3.5), ಇರಾನ್ ಪರ್ಹಾಮ್ ಮಘಸೂಡ್ಲೂ (3) ಜೊತೆ ಪಾಯಿಂಟ್ ಹಂಚಿಕೊಂಡರು.

ಚಾಲೆಂಜರ್ಸ್ ವಿಭಾಗದಲ್ಲಿ ವಿಶ್ವಕಪ್ ವಿಜೇತೆ ದಿವ್ಯಾ ದೇಶಮುಖ್ (3), ಹಾಲೆಂಡ್ನ ಥಾಮಸ್ ಬೀರ್ಡ್ಸೆನ್ (3.5) ಜೊತೆ ಡ್ರಾ ಮಾಡಿಕೊಂಡರೆ, ಸೂರ್ಯಶೇಖರ ಗಂಗೂಲಿ (1.5), ಸ್ಪೇನ್ನ ಡೇನಿಲ್ ಯುಫಾ (3) ಜೊತೆ ಡ್ರಾ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.