ನವದೆಹಲಿ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ಭಾರತ ಹಾಕಿ ತಂಡದ ಆಟಗಾರ ಗುರ್ಜಂತ್ ಸಿಂಗ್ ಅವರು ಅಂತರರಾಷ್ಟ್ರೀಯ ಹಾಕಿಗೆ ಶುಕ್ರವಾರ ನಿವೃತ್ತಿ ಪ್ರಕಟಿಸಿದರು. ಬೆನ್ನುನೋವಿನ ಕಾರಣ ಅವರು ತಂಡದಿಂದ ಹೊರಬಿದಿದ್ದರು.

‘ಭಾರತ ತಂಡದಿಂದ ಹೊರಬಿದ್ದ ನಂತರ ನಿವೃತ್ತಿ ಹೇಳಲು ಇದು ಸಕಾಲ’ ಎಂದು 31 ವರ್ಷ ವಯಸ್ಸಿನ ಫಾರ್ವರ್ಡ್ ಆಟಗಾರ ಹೇಳಿದ್ದಾರೆ. ಶುಕ್ರವಾರ ರಾತ್ರಿ ನಡೆದ ಹಾಕಿ ಇಂಡಿಯಾದ ಎಂಟನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ತಮ್ಮ ನಿರ್ಧಾರ ಪ್ರಕಟಿಸಿದರು.

ಸೀನಿಯರ್ ಮಟ್ಟದಲ್ಲಿ ಅವರು ಭಾರತ ತಂಡವನ್ನು 130 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.

ಅಮೃತಸರದ ಖೈಲಾರ ಗ್ರಾಮದ ಈ ಆಟಗಾರ ಟೋಕಿಯೊ ಮತ್ತು ಪ್ಯಾರಿಸ್ ಒಲಿಂಪಿಕ್ಸ್ಗಳಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದಲ್ಲಿ ಆಡಿದ್ದರು. 2023ರಲ್ಲಿ ಚೀನಾದ ಹಾಂಗ್ಝೌನಲ್ಲಿ ನಡೆದ ಏಷ್ಯನ್ ಕ್ರೀಡೆಗಳಲ್ಲೂ ಭಾರತ ತಂಡ ಚಿನ್ನ ಗೆಲ್ಲುವಲ್ಲಿ ಪ್ರಮುಖ ಕೊಡುಗೆ ನೀಡಿದ್ದರು.

2025ರಲ್ಲಿ ಪ್ರೊ ಲೀಗ್ ನಂತರ ಬೆನ್ನು ನೋವಿನಿಂದಾಗಿ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದರು. ‘ಏಳು– ಎಂಟು ತಿಂಗಳಿಂದ ನಾನು ಆಟವಾಡಲು ಆಗಿರಲಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.