ರಾಂಚಿ: ಇಲ್ಲಿ ನಡೆದ ಫೆಡರೇಶನ್ ಕಪ್ ಅಥ್ಲೆಟಿಕ್ಸ್ನಲ್ಲಿ ಭಾರತದ ಗುರ್ವಿಂದರ್ ಸಿಂಗ್ ಅವರು 100 ಮೀಟರ್ ಓಟವನ್ನು ಕೇವಲ 10.09 ಸೆಕೆಂಡುಗಳಲ್ಲಿ ತಲುಪುವ ಮೂಲಕ ರಾಷ್ಟ್ರೀಯ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಕಾಮನ್ವೆಲ್ತ್ ಮತ್ತು ಏಷ್ಯನ್ ಕ್ರೀಡಾಕೂಟಕ್ಕೆ ಅವರು ಅರ್ಹತೆ ಪಡೆದುಕೊಂಡಿದ್ದಾರೆ.

ರಾಂಚಿಯಲ್ಲಿ ನಡೆದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಗುರ್ವಿಂದರ್ ಅವರು ತಮ್ಮ ಅಮೋಘ ಓಟದ ಮೂಲಕ 10.10 ಸೆಕೆಂಡುಗಳಿಗಿಂತ ಕಡಿಮೆ ಸಮಯದಲ್ಲಿ ಗುರಿ ತಲುಪಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ಅವರು ತಮ್ಮದಾಗಿಸಿಕೊಂಡಿದ್ದಾರೆ. ಆ ಮೂಲಕ ಅನಿಮೇಶ್ ಕುಜುರ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದ್ದಾರೆ.

ಇದೇ ಸ್ಪರ್ಧೆಯಲ್ಲಿ ಕುಜುರ್ ಅವರು 10.20 ಸೆಕೆಂಡುಗಳಲ್ಲಿ ಈ ಗುರಿ ತಲುಪುವ ಮೂಲಕ ಎರಡನೇ ಸ್ಥಾನ ಪಡೆದರೆ, ಪ್ರಣವ್ ಪ್ರಮೋದ್ 10.29 ಸೆಕೆಂಡುಗಳಲ್ಲಿ ಈ ಗುರಿ ತಲುಪಿ ಮೂರನೇ ಸ್ಥಾನ ಪಡೆದುಕೊಂಡರು.

ಫೆಡರೇಶನ್ ಕಪ್ ಅಥ್ಲೆಟಿಕ್ಸ್ 2026ರ ಕಾಮನ್ವೆಲ್ತ್ ಕ್ರೀಡಾಕೂಟದ ಅರ್ಹತಾ ಸುತ್ತಿನ ಪಂದ್ಯವಾಗಿದ್ದರಿಂದ ಶನಿವಾರ ನಡೆದ ಓಟದ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ ಗುರ್ವಿಂದರ್ ಕಾಮನ್ವೆಲ್ತ್ ಕೂಡಕ್ಕೆ ಅರ್ಹತೆ ಪಡೆದುಕೊಂಡರು.

ರೈತನ ಮಗನಿಂದ ದಾಖಲೆ

ಪಂಜಾಬ್ನ ರೈತ ಕುಟುಂಬದ ಗುರ್ವಿಂದರ್ ಸಿಂಗ್, ಈ ದಾಖಲೆ ಬರೆಯುವುದಕ್ಕೂ ಮುನ್ನ ತಮ್ಮ ಬೆನ್ನಿನ ಮೇಲೆ ‘ಟಾಸ್ಕ್ 10.10 ಇನ್ನೂ ಮುಗಿದಿಲ್ಲ. ನಾನು ಇಲ್ಲಿ ನಿಂತಿದ್ದೇನೆ’ ಎಂದು ಬರೆದುಕೊಂಡಿದ್ದರು. ಈ ಸಂದೇಶ ಬರೆದುಕೊಂಡ ಕೆಲವೇ ಕ್ಷಣಗಳ ಬಳಿಕ ಅವರು 10.9 ಸೆಕೆಂಡುಗಳಲ್ಲಿ ಓಡಿ ಗುರಿ ಮುಟ್ಟಿದ್ದಾರೆ.

ಇದೇ ಕ್ರೀಡಾಕೂಟದಲ್ಲಿ ಶುಕ್ರವಾರದಂದು, ಅವರು 10.17 ಸೆಕೆಂಡುಗಳಲ್ಲಿ ಈ ಗುರಿ ತಲುಪಿದ್ದರು. ಅದಾದ ಐದು ನಿಮಿಷಗಳ ಅಂತರದಲ್ಲಿ ಅನಿಮೇಶ್ ಕುಜುರ್ 10.15 ಸೆಕೆಂಡುಗಳಲ್ಲಿ ಓಡಿ 100 ಮೀಟರ್ ಓಟದಲ್ಲಿ ಹೊಸ ದಾಖಲೆ ಮಾಡಿದ್ದರು. ಆದರೆ, ಶನಿವಾರ ಕುಜುರ್ ಅವರ ದಾಖಲೆ ಮುರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.