ನವದೆಹಲಿ: ಅನುಭವಿ ಡ್ರ್ಯಾಗ್ ಫ್ಲಿಕ್ಕರ್ ಹರ್ಮನ್ಪ್ರೀತ್ ಸಿಂಗ್ ಅವರು ಭಾರತ ಹಾಕಿ ತಂಡಕ್ಕೆ ನಾಯಕರಾಗಿ ಮರಳಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಎಫ್ಐಎಚ್ ಪ್ರೊ ಲೀಗ್ನ ಯುರೋಪಿಯನ್ ಲೆಗ್ನಲ್ಲಿ ಅವರು ತಂಡನ್ನು ಮುನ್ನಡೆಸಲಿದ್ದಾರೆ.

ಇದೇ ಆಗಸ್ಟ್ನಲ್ಲಿ ನಡೆಯಲಿರುವ ವಿಶ್ವಕಪ್ ಹಾಕಿ ಟೂರ್ನಿಗೆ ಸಿದ್ಧತೆಯ ದೃಷ್ಟಿಯಿಂದ ಭಾರತಕ್ಕೆ ಯುರೋಪಿನ ಲೆಗ್ ಮಹತ್ವದ್ದಾಗಿದೆ.

ವೈಯಕ್ತಿಕ ಕಾರಣ ನೀಡಿ ಹರ್ಮನ್ಪ್ರೀತ್ ಅವರು ಫೆಬ್ರುವರಿಯಲ್ಲಿ ನಡೆದಿದ್ದ ಹೋಬಾರ್ಟ್ ಲೆಗ್ನಿಂದ ಹಿಂದೆಸರಿದಿದ್ದರು.

ಭಾರತ ತಂಡ ಮೊದಲು ಬ್ರಸೆಲ್ಸ್ಗೆ ತೆರಳಿ ತರಬೇತಿಯಲ್ಲಿ ತೊಡಗಲಿದೆ. ಜೂನ್ 7 ರಿಂದ 9ವರೆಗೆ ಸೌಹಾರ್ದ ಪಂದ್ಯಗಳನ್ನು ಆಡಲಿದೆ. ಇಲ್ಲಿ ಶಿಬಿರದ ನಂತರ ಜೂನ್ 10ರಂದು ನೆದರ್ಲೆಂಡ್ಸ್ನ ರೋಟರ್ಡ್ಯಾಮ್ಗೆ ತೆರಳಲಿದೆ. ಜೂನ್ 14 ರಿಂದ 21ರವರೆಗಿನ ಅವಧಿಯಲ್ಲಿ ಜರ್ಮನಿ ಮತ್ತು ನೆದರ್ಲೆಂಡ್ಸ್ ವಿರುದ್ಧ ಪ್ರೊ ಲೀಗ್ ಪಂದ್ಯಗಳನ್ನು ಆಡಲಿದೆ.

ನಂತರ ಲಂಡನ್ಗೆ ತಂಡ ಪಯಣಿಸಲಿದ್ದು, ಅಲ್ಲಿ ಜೂನ್ 23 ರಿಂದ 28ರ ಅವಧಿಯಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಪಂದ್ಯಗಳಲ್ಲಿ ಮುಖ್ಯಾಮುಖಿಯಾಗಲಿದೆ.

ತಂಡ ಹೀಗಿದೆ: ಗೋಲ್ಕೀಪರ್ಸ್: ಎಂ.ಎಚ್.ಶಶಿಕುಮಾರ್, ಸೂರಜ್ ಕರ್ಕೇರಾ. ಡಿಫೆಂಡರ್ಸ್: ಹರ್ಮನ್ಪ್ರೀತ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್, ಸುಮಿತ್, ಸಂಜಯ್, ಯಶದೀಪ್ ಸಿವಾಚ್, ಅಮನದೀಪ್ ಲಾಕ್ರಾ, ಜರ್ಮನ್ಪ್ರೀತ್ ಸಿಂಗ್, ಜುಗರಾಜ್ ಸಿಂಗ್.

ಮಿಡ್ಫೀಲ್ಡರ್ಸ್: ಹಾರ್ದಿಕ್ ಸಿಂಗ್, ಮನ್ಪ್ರೀತ್ ಸಿಂಗ್, ರಾಜಿಂದರ್ ಸಿಂಗ್, ರಾಜಕುಮಾರ್ ಪಾಲ್, ನೀಲಕಂಠ ಶರ್ಮಾ, ವಿವೇಕಸಾಗರ ಪ್ರಸಾದ್, ರವಿಚಂದ್ರ ಸಿಂಗ್ ಮೊಯರಂಗ್ಥೆಮ್. ಫಾರ್ವರ್ಡ್ಸ್: ಮನದೀಪ್ ಸಿಂಗ್, ಸುಖಜೀತ್ ಸಿಂಗ್, ಅಭಿಷೇಕ್, ಆದಿತ್ಯ ಅರ್ಜುನ್ ಲಾಲಗೆ, ದಿಲ್ಪ್ರೀತ್ ಸಿಂಗ್, ಶಿಲಾನಂದ ಲಾಖ್ರಾ, ಸೆಲ್ವಂ ಕಾರ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.