ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್ ಒಲಿಂಪಿಕ್‌ ಸಮಿತಿ ಮೊದಲ ಅಧ್ಯಕ್ಷೆ ಬ್ರಿಗೆಟ್ಟೆ ಹೆನ್ರಿಕ್ಸ್‌ ರಾಜೀನಾಮೆ

Published 26 ಮೇ 2023, 5:57 IST
Last Updated 26 ಮೇ 2023, 5:57 IST
ಅಕ್ಷರ ಗಾತ್ರ

ಪ್ಯಾರಿಸ್‌: ಫ್ರಾನ್ಸ್‌ ಒಲಿಂಪಿಕ್‌ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಬ್ರಿಗೆಟ್ಟೆ ಹೆನ್ರಿಕ್ಸ್‌ ರಾಜೀನಾಮೆ ನೀಡಿದ್ದಾರೆ. ಇದರಿಂದ ಮುಂದಿನ ವರ್ಷದ ಬೇಸಿಗೆ ಒಲಿಂಪಿಕ್ಸ್‌ ಸಿದ್ಧತೆಯ ಮೇಲೆ ಸಣ್ಣ ಮಟ್ಟಿಗೆ ಕಂಪನವಾಗಿದೆ.

ಒಲಿಂಪಿಕ್ಸ್‌ನಲ್ಲಿ ಫ್ರಾನ್ಸ್‌ ಫುಟ್‌ಬಾಲ್‌ ತಂಡವನ್ನು ಪ್ರತಿನಿಧಿಸಿದ್ದ ಬ್ರಿಗೆಟ್ಟೆ, ಒಲಿಂಪಿಕ್‌ ಸಮಿತಿಗೆ ಮೊದಲ ಅಧ್ಯಕ್ಷೆ ಆಗಿದ್ದರು. ಫ್ರೆಂಚ್‌ ಒಲಿಂಪಿಕ್‌ ಸಮಿತಿಯಲ್ಲಿ ಆಂತರಿಕ ಕಲಹದ ತೀವ್ರಗೊಂಡ ಅವಧಿಯಲ್ಲೇ ಅವರ ರಾಜೀನಾಮೆ ಪ್ರಕಟಗೊಂಡಿದೆ.

ಗುರುವಾರ ನಡೆದ ಜನರಲ್‌ ಅಸೆಂಬ್ಲಿ ಸಭೆಯ ಆರಂಭದಲ್ಲೇ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಅವರು ಪ್ರಕಟಿಸಿದರು ಎಂದು ಫ್ರೆಂಚ್‌ ಒಲಿಂಪಿಕ್‌ ಸಮಿತಿ ಹೇಳಿಕೆ ತಿಳಿಸಿದೆ. ರಾಜೀನಾಮೆಗೆ ಕಾರಣವೇನೆಂಬುದು ಉಲ್ಲೇಖವಾಗಿಲ್ಲ. ಆದರೆ ಸಭೆಯಲ್ಲಿದ್ದವರಿಗೆ ಅವರು ವಿವರಣೆ ನೀಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಲಾಗಿದೆ. 2021 ರಿಂದ ಅವರು ಸಮಿತಿಗೆ ಅಧ್ಯಕ್ಷೆಯಾಗಿದ್ದರು.

ಒಲಿಂಪಿಕ್ಸ್‌ ಆರಂಭಕ್ಕೆ 430 ದಿನಗಳು ಉಳಿದಿವೆ. ತೆರವಾಗಿರುವ ಅವರ ಸ್ಥಾನವನ್ನು ಒಲಿಂಪಿಕ್‌ ಸಮಿತಿ ಮಹಾ ಕಾರ್ಯದರ್ಶಿ ಅಸ್ಟ್ರಿಡ್‌ ಗುಯರ್ಟ್‌ ಅವರು ತಾತ್ಕಾಲಿಕವಾಗಿ ನಿರ್ವಹಿಸಲಿದ್ದಾರೆ ಎಂದು ಸಮಿತಿ ತಿಳಿಸಿದೆ. ಹಂಗಾಮಿ ಅಧ್ಯಕ್ಷ ಗುಯರ್ಟ್‌ ಅವರು ಪ್ಯಾರಿಸ್‌ 2024ರ ಆಡಳಿತ ಮಂಡಳಿ ಸದಸ್ಯರೂ ಆಗಿದ್ದಾರೆ.

ಫ್ರಾನ್ಸ್‌ನಲ್ಲಿ ವಿವಿಧ ಕ್ರೀಡಾಸಂಸ್ಥೆಗಳ ಅಧ್ಯಕ್ಷರ ರಾಜೀನಾಮೆಗಳು ಹೊಸದಲ್ಲ. ವಿವಿಧ ಕಾರಣಗಳಿಂದ ಫ್ರಾನ್ಸ್‌ ಫುಟ್‌ಬಾಲ್‌ ಸಂಸ್ಥೆ ಅಧ್ಯಕ್ಷ, ರಗ್ಬಿ ಸಂಸ್ಥೆ ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT