ನವದೆಹಲಿ: ಭಾರತ ತಂಡದ ಸ್ಟಾರ್ ಮಿಡ್ಫೀಲ್ಡರ್ ಹಾರ್ದಿಕ್ ಸಿಂಗ್, ಮುನ್ಪಡೆ ಆಟಗಾರರಾದ ಸುಖಜೀತ್ ಸಿಂಗ್, ಸಂಜಯ್ ಮತ್ತು ಡಿಫೆಂಡರ್ ಅಭಿಷೇಕ್ ಅವರು ಹಾಕಿ ಇಂಡಿಯಾದ ‘ಬಲ್ಬೀರ್ ಸಿಂಗ್ ಸೀನಿಯರ್ ವರ್ಷದ ಆಟಗಾರ’ ಪ್ರಶಸ್ತಿಯ ರೇಸ್ನಲ್ಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ತಂಡದ ನಾಯಕಿ ಸಲಿಮಾ ಟೇಟೆ, ನವನೀತ್ ಕೌರ್, ಲಾಲ್ರೆಮ್ಸಿಯಾಮಿ ಮತ್ತು ಸವಿತಾ ಅವರು ‘ವರ್ಷದ ಆಟಗಾರ್ತಿ’ ಗೌರವಕ್ಕೆ ನಾಮನಿರ್ದೇಶನಗೊಂಡಿದ್ದಾರೆ.

ಹಾಕಿ ಇಂಡಿಯಾದ ವಾರ್ಷಿಕ ಪ್ರಶಸ್ತಿಗಳನ್ನು ಶುಕ್ರವಾರ ಇಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಅಂದು 21 ವರ್ಷದೊಳಗಿನವರ ವಿಭಾಗದ ಶ್ರೇಷ್ಠ ಆಟಗಾರ, ಆಟಗಾರ್ತಿ ಪ್ರಶಸ್ತಿಗಳನ್ನೂ ಪ್ರದಾನ ಮಾಡಲಾಗುವುದು.

ಎಂಟು ವಿಭಾಗಗಳಲ್ಲಿ ಒಟ್ಟು 32 ಮಂದಿ ಆಟಗಾರ ಮತ್ತು ಆಟಗಾರ್ತಿಯರ ಹೆಸರನ್ನು ಅಂತಿಮಗೊಳಿಸಲಾಗಿದೆ.

ಬಲ್ಜಿತ್ ಸಿಂಗ್ ವರ್ಷದ ಗೋಲ್ಕೀಪರ್ ಪ್ರಶಸ್ತಿ, ಪರ್ಗತ್ ಸಿಂಗ್ ವರ್ಷದ ರಕ್ಷಣೆ ಆಟಗಾರ ಪ್ರಶಸ್ತಿ, ಅಜಿತ್ ಪಾಲ್ ಸಿಂಗ್ ವರ್ಷದ ಮಿಡ್ಫೀಲ್ಡರ್ ಪ್ರಶಸ್ತಿ, ಧನರಾಜ್ ಪಿಳ್ಳೆ ವರ್ಷದ ಫಾರ್ವರ್ಡ್ ಆಟಗಾರ ಪ್ರಶಸ್ತಿ, ಅಸುಂತ ಲಾಕ್ರಾ ವರ್ಷದ ಉದಯೋನ್ಮುಖ ಆಟಗಾರ್ತಿ (21 ವರ್ಷದೊಳಗಿನ ಮಹಿಳೆಯರು) ಪ್ರಶಸ್ತಿ ಮತ್ತು ಜುಗರಾಜ್ ಸಿಂಗ್ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನೂ ಅಂದು ಪ್ರದಾನ ಮಾಡಲಾಗುವುದು.

ಏಷ್ಯಾ ಕಪ್ ಗೆದ್ದುಕೊಂಡ ಭಾರತ ಪುರುಷರ ತಂಡ ಮತ್ತು ವಿಶ್ವಕಪ್ನಲ್ಲಿ ಕಂಚು ಗೆದ್ದ ಜೂನಿಯರ್ ತಂಡವನ್ನು ಇದೇ ಸಮಾರಂಭದಲ್ಲಿ ಅಭಿನಂದಿಸಲಾಗುತ್ತದೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.