ನವದೆಹಲಿ: ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಅವರು ತನ್ನ ಆದೇಶವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿ ನ್ಯಾಯಾಂಗ ನಿಂದನೆ ಎಸಗಿದ್ದಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಶಿಕ್ಷೆಗೆ ಸಂಬಂಧಿಸಿದ ವಿಚಾರಣೆಯನ್ನು ಮೇ 4ರಂದು ನಡೆಸುವುದಾಗಿ ನ್ಯಾ.ಪುರುಷೈಂದ್ರ ಕುಮಾರ್ ಕೌರವ್ ಅವರು ಹೇಳಿದ್ದಾರೆ. ಆದಕ್ಕಿಂತ ಮೊದಲು ತಪ್ಪನ್ನು ತಿದ್ದಿಕೊಂಡು ಶಿಕ್ಷೆಯ ಪ್ರಮಾಣ ಕಡಿಮೆಮಾಡಿಕೊಳ್ಳುವ ಅವಕಾಶವನ್ನು ನ್ಯಾಯಾಲಯ ಅವರಿಗೆ ನೀಡಿದೆ.

ಈ ಹಿಂದೆ, 2025ರ ಜನವರಿ 17ರಂದು ನ್ಯಾಯಾಲಯವು ನೀಡಿದ ಆದೇಶವನ್ನು ಹಾಕಿ ಇಂಡಿಯಾ ಅಧಿಕಾರಿಗಳು ಪಾಲಿಸಿಲ್ಲ ಎಂದು ಹಾಕಿ ಇಂಡಿಯಾದ ಚುನಾಯಿತ ಉಪಾಧ್ಯಕ್ಷೆ ಸಯೀದ್ ಅಸೀಮಾ ಅಲಿ ಅವರು ದೂರಿದ್ದರು.

ಹಾಕಿ ಇಂಡಿಯಾದ ಕಾರ್ಯಕಾರಿ ಮಂಡಳಿ ಸಭೆಗಳಿಗೆ ಹಾಜರಾಗಲು ಅನುಕೂಲವಾಗುವಂತೆ ಅರ್ಜಿದಾರರಿಗೆ ಅಗತ್ಯ ಲಿಂಕ್ಗಳನ್ನು ಕಳುಹಿಸಬೇಕು ಎಂದು ನ್ಯಾಯಾಲಯವು ಈ ಮೊದಲು ಹಾಕಿ ಇಂಡಿಯಾ ಅಧಿಕಾರಿಗಳಿಗೆ ಸೂಚಿಸಿತ್ತು. ಆದರೆ 2025ರ ಜುಲೈ 4 ಮತ್ತು ಜುಲೈ 27ರ ಸಭೆಗಳಿಗೆ ಹಾಜರಾಗಲು ತಮಗೆ ಅಗತ್ಯವಿರುವ ಲಿಂಕ್ ಕಳುಹಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಆ ಮೂಲಕ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿದ್ದಾರೆ ಎಂದು ಅರ್ಜಿದಾರರಾದ ಅಸೀಮಾ ಅಲಿ ಹೇಳಿದ್ದರು.

ಆದೇಶದಲ್ಲಿ ಮಾರ್ಪಾಡು ಮಾಡಬೇಕೆಂಬ ಮನವಿಯನ್ನು ಪ್ರತಿವಾದಿಗಳು ಮಾಡಿಲ್ಲ. ಸಭೆಗೆ ಹಾಜರಾಗುವ ಸಂಬಂಧ ಅರ್ಜಿದಾರರಿಗೆ ಲಿಂಕ್ ಕಳುಹಿಸದೇ ಹಾಕಿ ಇಂಡಿಯಾ ಅಧಿಕಾರಿಗಳು, ನಿರ್ದಿಷ್ಟವಾಗಿ ಭೋಲಾನಾಥ್ ನ್ಯಾಯಾಂಗ ನಿಂದನೆ ಮಾಡಿದ್ದಾರೆ. ಅಷ್ಟೇ ಅಲ್ಲ, ತನ್ನ ತಪ್ಪಿಗೆ ವಿಷಾದ ವ್ಯಕ್ತಪಡಿಸಿಲ್ಲ. ಕ್ಷಮಾಪಣೆಯನ್ನು ಕೇಳುವುದು ಬಿಡಿ, ಅಂಥ ಪ್ರಯತ್ನವನ್ನೂ ಮಾಡಿಲ್ಲ ಎಂದು ನ್ಯಾಯಾಲಯ ಕಟುವಾಗಿ ಹೇಳಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-51-2092854594

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.