ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ: ಉತ್ತರ ಪ್ರದೇಶಕ್ಕೆ ಮಣಿದ ಕರ್ನಾಟಕ

Published : 18 ಸೆಪ್ಟೆಂಬರ್ 2024, 15:33 IST
Last Updated : 18 ಸೆಪ್ಟೆಂಬರ್ 2024, 15:33 IST
ಫಾಲೋ ಮಾಡಿ
Comments

ಜಲಂಧರ್: ಉತ್ತರ ಪ್ರದೇಶ ಮತ್ತು ಪಂಜಾಬ್‌ ತಂಡಗಳು ಇಲ್ಲಿ ನಡೆಯುತ್ತಿರುವ ಜೂನಿಯರ್ ರಾಷ್ಟ್ರೀಯ ಪುರುಷರ ಹಾಕಿ ಟೂರ್ನಿಯಲ್ಲಿ ಫೈನಲ್‌ ಪ್ರವೇಶ ಮಾಡಿವೆ.

ಬುಧವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಉತ್ತರ ಪ್ರದೇಶ ತಂಡವು 3–1 ಗೋಲುಗಳಿಂದ ಕರ್ನಾಟಕ ತಂಡವನ್ನು ಸೋಲಿಸಿತು. ಉತ್ತರ ಪ್ರದೇಶದ ಪರ ರಾಜೇಶ್‌ ಯಾದವ್‌ (41ನೇ ನಿಮಿಷ), ಅಜಿತ್‌ ಕುಮಾರ್‌ (45ನೇ) ಮತ್ತು ಫಹಾದ್ ಖಾನ್ (57ನೇ) ಗೋಲು ಗಳಿಸಿದರೆ, ಕರ್ನಾಟಕದ ಪರ ಏಕೈಕ ಗೋಲನ್ನು ನಾಯಕ ಸುನಿಲ್‌ ಪಿ.ಬಿ. ದಾಖಲಿಸಿದರು.

ಮತ್ತೊಂದು ಸೆಮಿಫೈನಲ್‌ನಲ್ಲಿ ಪಂಜಾಬ್‌ ತಂಡವು 7–6ರಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ಹರಿಯಾಣ ತಂಡವನ್ನು ಮಣಿಸಿತು. ನಿಗದಿತ ಅವಧಿಯಲ್ಲಿ ಪಂದ್ಯವು 4–4 ಗೋಲುಗಳಿಂದ ಡ್ರಾ ಆಗಿತ್ತು.

ಮೂರನೇ ಸ್ಥಾನಕ್ಕಾಗಿ ಕರ್ನಾಟಕ ಮತ್ತು ಹರಿಯಾಣ ತಂಡಗಳು ಗುರುವಾರ ಪೈಪೋಟಿ ನಡೆಸಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT