ಜಲಂಧರ್: ಕರ್ನಾಟಕ ತಂಡ, 14ನೇ ಹಾಕಿ ಇಂಡಿಯಾ ಜೂನಿಯರ್ ಪುರುಷರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಎಚ್ ಗುಂಪಿನ ಲೀಗ್ ಪಂದ್ಯದಲ್ಲಿ ಭಾನುವಾರ 6–1 ಗೋಲುಗಳಿಂದ ಕೇರಳ ತಂಡವನ್ನು ಸದೆಬಡಿಯಿತು.
ಆರ್ಯನ್ ಉತ್ತಪ್ಪ (6 ಮತ್ತು 35ನೇ ನಿಮಿಷ), ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧಿಸಿದ್ದ ಸುನೀಲ್ ಪಿ.ಬಿ. (8 ಮತ್ತು 45ನೇ ನಿಮಿಷ) ತಲಾ ಎರಡೆರಡು ಗೋಲುಗಳನ್ನು ಗಳಿಸಿದರು.
ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಹರಿಯಾಣ 6–1 ಗೋಲುಗಳಿಂದ ರಾಜಸ್ಥಾನ ಮೇಲೆ ಜಯಪಡೆಯಿತು.
ಆಂಧ್ರಪ್ರದೇಶ ಮತ್ತು ದೆಹಲಿ ನಡುವಣ ಲೀಗ್ ಪಂದ್ಯ 5–5 ಸಮಬಲಗೊಂಡಿತು.