ಚೆನ್ನೈ: ಒಡಿಶಾ ತಂಡವು, 95ನೇ ಎಂಸಿಸಿ– ಮುರುಗಪ್ಪ ಗೋಲ್ಡ್ ಕಪ್ ಅಖಿಲ ಭಾರತ ಹಾಕಿ ಟೂರ್ನಿ ಪಂದ್ಯದಲ್ಲಿ ಶುಕ್ರವಾರ ಕರ್ನಾಟಕ ತಂಡವನ್ನು 4–1 ಗೋಲುಗಳಿಂದ ಸೋಲಿಸಿತು.
ರಾಹುಲ್ ಎಕ್ಕಾ (22ನೇ ನಿಮಿಷ), ರಜತ್ ಆಕಾಶ್ ಟಿರ್ಕಿ (29), ಕಂಗಾಡಿ ಸತೀಶ್ (30 ಮತ್ತು 56ನೇ ನಿಮಿಷ) ಒಡಿಶಾ ಪರ ಗೋಲು ಗಳಿಸಿದರೆ, ಕಳೆದ ಬಾರಿಯ ರನ್ನರ್ ಅಪ್ ಕರ್ನಾಟಕ ಪರ ಚೇತನ್ ಮಲ್ಲಪ್ಪ ಅಂತರ ಕಡಿಮೆ ಮಾಡಿದರು.
ಇನ್ನೊಂದು ಪಂದ್ಯದಲ್ಲಿ ಮಹಾರಾಷ್ಟ್ರ ಹಿನ್ನಡೆಯಿಂದ ಚೇತರಿಸಿ 5–4 ಗೋಲುಗಳಿಂದ ಮಾಜಿ ಚಾಂಪಿಯನ್ ಬಿಪಿಸಿಎಲ್ ತಂಡವನ್ನು ಮಣಿಸಿತು.