ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್: ನಿವೃತ್ತಿಗೆ ಮುನ್ನ ನನ್ನ ಕೋಣೆ ತುಂಬ ಪದಕಗಳಿರಬೇಕು- ಚಿರಾಗ್

ಬ್ಯಾಡ್ಮಿಂಟನ್ ಆಟಗಾರ ಚಿರಾಗ್ ಶೆಟ್ಟಿ ಗುರಿ
Published 15 ಆಗಸ್ಟ್ 2023, 14:29 IST
Last Updated 15 ಆಗಸ್ಟ್ 2023, 14:29 IST
ಅಕ್ಷರ ಗಾತ್ರ

ಗುವಾಹಟಿ (ಪಿಟಿಐ): ಆಟದಿಂದ ನಿವೃತ್ತಿಯಾಗುವ ಮುನ್ನ  ತಮ್ಮ ಮನೆಯ ಕೋಣೆ ತುಂಬುವಷ್ಟು ಪದಕಗಳನ್ನು ಜಯಿಸುವುದೇ ಗುರಿ ಎಂದು ಬ್ಯಾಡ್ಮಿಂಟನ್ ಆಟಗಾರ ಚಿರಾಗ್‌ ಶೆಟ್ಟಿ ಹೇಳಿದ್ದಾರೆ.

ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್‌ ಸಾಯಿರಾಜ್ ರಣಕಿರೆಡ್ಡಿಯವರೊಂದಿಗೆ ಆಡುವ ಅವರು ಹೋದ ವರ್ಷ ಕಾಮನ್‌ವೆಲ್ತ್  ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದರು. ಪ್ರಸಕ್ತ ಋತುವಿನಲ್ಲಿ ಇಂಡೊನೇಷ್ಯಾ ಓಪನ್, ಏಷ್ಯಾ ಚಾಂಪಿಯನ್‌ಷಿಪ್, ಸ್ವಿಸ್ ಓಪನ್ ಮತ್ತು ಕೊರಿಯಾ ಓಪನ್ ಪ್ರಶಸ್ತಿ ಗೆದ್ದಿದ್ದರು.

‘ಎಲ್ಲ ಟೂರ್ನಿಗಳಲ್ಲಿಯೂ ಪದಕ ಜಯಿಸುವುದು ನಮ್ಮಿಬ್ಬರ ಗುರಿ. ಕೆಲವು ವರ್ಷಗಳ ನಂತರ ನಾವು ನಿವೃತ್ತರಾಗುತ್ತೇವೆ. ಅಷ್ಟರಲ್ಲಿ ನನ್ನ ಕೋಣೆಯಲ್ಲಿ ಪದಕಗಳು ತುಂಬಿರಬೇಕು. ಬ್ಯಾಡ್ಮಿಂಟನ್‌ ಕ್ರೀಡೆಯ ಎಲ್ಲ ಪ್ರತಿಷ್ಠಿತ ಪ್ರಶಸ್ತಿಗಳೂ ಅಲ್ಲಿರಬೇಕು’ ಎಂದು ಚಿರಾಗ್ ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

‘ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಷಿಪ್ ಸೇರಿದಂತೆ ಎಲ್ಲ ಪ್ರಶಸ್ತಿಗಳು ನಮ್ಮದಾಗಬೇಕು ಎಂಬ ಆಸೆ ಇದೆ. ಆದರೆ ಯಾವಾಗಲೂ ಟೂರ್ನಿಗಳಲ್ಲಿ ಆಡುವಾಗ ಸಮಚಿತ್ತದಿಂದ ಇರುತ್ತೇವೆ. ಫಲಿತಾಂಶದ ಬಗ್ಗೆ ಹೆಚ್ಚು ಯೋಚಿಸುವುದಿಲ್ಲ. ನಮ್ಮೊಳಗಿನ ಶ್ರೇಷ್ಠ ಆಟವನ್ನು ಆಡುವತ್ತ ಗಮನ ನೀಡುತ್ತೇವೆ. ಸಂಪೂರ್ಣ ಸಾಮರ್ಥ್ಯ ವಿನಿಯೋಗಿಸುತ್ತವೆ. ಅದು ಉತ್ತಮ ಫಲಿತಾಂಶ ನೀಡುತ್ತದೆ‘ ಎಂದರು.

ವಿಶ್ವ ಡಬಲ್ಸ್‌ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿ ಚಿರಾಗ್ ಮತ್ತು ಸಾತ್ವಿಕ್ ಇದ್ದಾರೆ. ಹೋದ ಬಾರಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಇದೇ 21ರಿಂದ ಡೆನ್ಮಾರ್ಕ್‌ನಲ್ಲಿ ವಿಶ್ವ ಚಾಂಪಿಯನ್‌ಷಿಪ್ ಆರಂಭವಾಗಲಿದೆ. ಅಲ್ಲಿಯೂ ಈ ಜೋಡಿ ಕಣಕ್ಕಿಳಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT