ನವದೆಹಲಿ: ಛತ್ತೀಸಗಢದ ಮೂರು ನಗರಗಳಾದ ರಾಯಪುರ, ಜಗದಲ್ಪುರ ಮತ್ತು ಸರ್ಗುಜಾದಲ್ಲಿ ಇದೇ 25ರಿಂದ ಏ.6ರವರೆಗೆ ಉದ್ಘಾಟನಾ ಆವೃತ್ತಿಯ ಖೇಲೊ ಇಂಡಿಯಾ ಬುಡಕಟ್ಟು ಕ್ರೀಡಾಕೂಟ (ಕೆಐಟಿಜಿ) ನಡೆಯಲಿದೆ.

ಕೂಟದಲ್ಲಿ ಅಥ್ಲೆಟಿಕ್ಸ್, ಫುಟ್ಬಾಲ್, ಹಾಕಿ, ವೇಟ್ಲಿಫ್ಟಿಂಗ್, ಆರ್ಚರಿ, ಈಜು ಮತ್ತು ಕುಸ್ತಿ ಎಂಬ ಕ್ರೀಡಾ ಸ್ಪರ್ಧೆಗಳು ಇರಲಿವೆ. ಮಲ್ಲಕಂಬ ಮತ್ತು ಕಬಡ್ಡಿ ಪ್ರದರ್ಶನ ಕ್ರೀಡೆಗಳಾಗಿವೆ. ಹೆಚ್ಚಿನ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪ್ರಾತಿನಿಧ್ಯ ಇರಲಿದೆ.

‘ಕ್ರೀಡೆಯನ್ನು ಆಡಲು ಬಯಸುವ ಪ್ರತಿಯೊಬ್ಬ ಯುವಕರಿಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ಖೇಲೊ ಇಂಡಿಯಾ ಬುಡಕಟ್ಟು ಕ್ರೀಡಾಕೂಟ ಆಯೋಜಿಸಲಾಗಿದೆ. ಇದು 2047ರ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕ್ಷಿತ್ ಭಾರತ್’ ಎಂಬ ದೃಷ್ಟಿಕೋನದ ಭಾಗವಾಗಿದೆ’ ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ.

ಡಿ.23ರಂದು ಬಿಲಾಸ್ಪುರದ ದಿವಂಗತ ಬಿ.ಆರ್. ಯಾದವ್ ಕ್ರೀಡಾ ಕ್ರೀಡಾಂಗಣದಲ್ಲಿ ಕ್ರೀಡಾಕೂಟದ ಲಾಂಛನ, ಥೀಮ್ ಸಾಂಗ್ ಮತ್ತು ಮ್ಯಾಸ್ಕಟ್ ಅನ್ನು ಅನಾವರಣಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.