ಶಾಂಘೈ (ಪಿಟಿಐ): ಮಾಜಿ ವಿಶ್ವ ಚಾಂಪಿಯನ್ ಓಜಸ್ ದೇವತಳೆ ನೇತೃತ್ವದಲ್ಲಿ ಭಾರತ ಪುರುಷರ ತಂಡ, ಆರ್ಚರಿ ವಿಶ್ವ ಕಪ್ ಸ್ಟೇಜ್ 2 ಟೂರ್ನಿಯ ಕಾಂಪೌಂಡ್ ವಿಭಾಗದ ಅರ್ಹತಾ ಸುತ್ತಿನಲ್ಲಿ ಮಂಗಳವಾರ ಉತ್ತಮ ಆರಂಭ ಮಾಡಿದೆ.

2023ರ ಬರ್ಲಿನ್ ವಿಶ್ವ ಆರ್ಚರಿ ಚಾಂಪಿಯನ್ಷಿಪ್ ಗೆದ್ದಿದ್ದ ದೇವತಳೆ, 711 ಪಾಯಿಂಟ್ಸ್ನೊಡನೆ ಒಟ್ಟಾರೆ ಏಳನೇ ಸ್ಥಾನದಲ್ಲಿ ಮುಗಿಸಿದರು. ಸಾಹಿಲ್ ಜಾಧವ್ ಸಹ 711 ಪಾಯಿಂಟ್ಸ್ ಗಳಿಸಿ ನಂತರದ ಸ್ಥಾನ ಗಳಿಸಿದರು. ಕುಶಲ್ ದಲಾಲ್ ಅವರು ಒಟ್ಟಾರೆ 18ನೇ ಸ್ಥಾನ ಗಳಿಸಿದರು. ತಂಡ ಮೂರನೇ ಶ್ರೇಯಾಂಕ ಗಿಟ್ಟಿಸಿತು.

ಆದರೆ, ಏಷ್ಯನ್ ಗೇಮ್ಸ್ ಪದಕ ವಿಜೇತ ಅಭಿಷೇಕ್ ವರ್ಮಾ ನಿರಾಸೆ ಅನುಭವಿಸಿ 705 ಪಾಯಿಂಟ್ಗಳೊಡನೆ 25ನೇ ಸ್ಥಾನ ಪಡೆದರು. ವೈಯಕ್ತಿಕ ಎಲಿಮಿನೇಷನ್ ಸುತ್ತಿನಲ್ಲಿ ಪಾಲ್ಗೊಳ್ಳಲು ಅವರಿಗೆ ಇನ್ನೂ ಅವಕಾಶವಿದೆ.

ಕಾಂಪೌಂಡ್ ಮಹಿಳಾ ತಂಡ ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ಅದಿತಿ ಸ್ವಾಮಿ 700 ಪಾಯಿಂಟ್ಗಳೊಡನೆ 13ನೇ ಸ್ಥಾನ ಗಳಿಸಿದರು. ಪ್ರಗತಿ 19ನೇ ಸ್ಥಾನ (697) ಗಳಿಸಿದರು. ಜ್ಯೋತಿ ಸುರೇಖಾ ವೆನ್ನಂ 21ನೇ ಸ್ಥಾನಕ್ಕೆ ಸರಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-2050261367

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.