ಶಾಂಘೈ (ಪಿಟಿಐ): ಅನುಭವಿಗಳಾದ ದೀಪಿಕಾ ಕುಮಾರಿ, ಅಂಕಿತಾ ಭಕತ್ ಮತ್ತು ಹದಿಹರೆಯದ ಕುಂಕುಮ್ ಮೊಹದ್ ಅವರನ್ನು ಒಳಗೊಂಡಿದ್ದ ಭಾರತ ರಿಕರ್ವ್ ತಂಡ ತೀವ್ರ ಹೋರಾಟದ ಫೈನಲ್ನಲ್ಲಿ ಆತಿಥೇಯ ಚೀನಾ ತಂಡವನ್ನು ಸೋಲಿಸಿ ಆರ್ಚರಿ ವಿಶ್ವಕಪ್ ಸ್ಟೇಜ್ 2 ಟೂರ್ನಿಯಲ್ಲಿ ಚಿನ್ನ ಗೆದ್ದುಕೊಂಡಿತು.

ಅದೃಷ್ಟಗಳ ಏರಿಳಿತ ಕಂಡ ಫೈನಲ್ನಲ್ಲಿ ಭಾರತ ಶೂಟೌಟ್ ನಂತರ 5–4 (28–26) ರಿಂದ ಫೆವರೀಟ್ ಎನಿಸಿದ್ದ ಚೀನಾ ತಂಡವನ್ನು ಸೋಲಿಸಿತು. ನಾಲ್ಕು ಸೆಟ್ಗಳ ನಿಯಮಿತ ಅವಧಿ 4–4 ರಿಂದ ಸಮನಾಗಿತ್ತು.

ಇದರೊಂದಿಗೆ ಈ ವಿಶ್ವಕಪ್ ನಲ್ಲಿ ಭಾರತ ಕೇವಲ ಎರಡು ಪದಕಗಳೊಂದಿಗೆ ತವರಿಗೆ ಮರಳಬೇಕಾಯಿತು. ಸಾಹಿಲ್ ಜಾಧವ್ ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದರು.

ಸಿಮ್ರನ್ಜೀತ್ಗೆ ನಿರಾಸೆ: ರಿಕರ್ವ್ ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಭಾರತದ ಸಿಮ್ರನ್ಜೀತ್ ಕೌರ್ ಅವರು ಸೆಮಿಫೈನಲ್ನಲ್ಲಿ ವಿಶ್ವದ ಅಗ್ರಮಾನ್ಯ ಬಿಲ್ಗಾರ್ತಿ ಕಾಂಗ್ ಚೇಯೊಂಗ್ (ದಕ್ಷಿಣ ಕೊರಿಯಾ) ಅವರಿಗೆ ಮಣಿದು ನಿರಾಸೆ ಅನುಭವಿಸಿದರು.

ಕಂಚಿನ ಪದಕಕ್ಕೆ ನಡೆದ ಪ್ಲೇ ಆಫ್ನಲ್ಲೂ ಅವರಿಗೆ ಗೆಲುವು ಒಲಿಯಲಿಲ್ಲ. ದಕ್ಷಿಣ ಕೊರಿಯಾ ಇನ್ನೊಬ್ಬ ಬಿಲ್ಗಾರ್ತಿ ಜಾಂಗ್ ಮಿನ್ಹೀ ಅವರಿಗೆ ಮಣಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-51-2015803234

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.