ಬುಡಾಪೆಸ್ಟ್: ದೊಮ್ಮರಾಜು ಗುಕೇಶ್ ಮತ್ತು ಅರ್ಜುನ್ ಇರಿಗೇಶಿ ಉತ್ತಮ ಪ್ರದರ್ಶನ ಮುಂದುವರಿಸಿದ ಪರಿಣಾಮ ಭಾರತ, 45ನೇ ಚೆಸ್ ಒಲಿಂಪಿಯಾಡ್‌ನ ಓಪನ್ ವಿಭಾಗದ ಎಂಟನೇ ಸುತ್ತಿನಲ್ಲಿ ಇರಾನ್ ತಂಡವನ್ನು ಗುರುವಾರ 3.5–0.5 ರಿಂದ ಸೋಲಿಸಿ ಅಗ್ರಸ್ಥಾನ ಉಳಿಸಿಕೊಂಡಿದೆ. ಇನ್ನು ಮೂರು ಸುತ್ತಿನ ಪಂದ್ಯಗಳು ಉಳಿದಿವೆ.