ಮೊನಾಕೊ: ಎರಡು ವರ್ಷಗಳಿಂದ ಡೋಪಿಂಗ್ ನಿಯಮ ಉಲ್ಲಂಘಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಇದೀಗ ವಿಶ್ವ ಅಥ್ಲೆಟಿಕ್ಸ್ನ ಅಥ್ಲೆಟಿಕ್ಸ್ ಇಂಟೆಗ್ರಿಟಿ ಘಟಕವು (ಎಐಯು), ಭಾರತವನ್ನು ‘ಉದ್ದೀಪನ ಮದ್ದುಸೇವನೆ ವಿಷಯದಲ್ಲಿ ಅತಿ ಹೆಚ್ಚಿನ ಅಪಾಯ ಎದುರಿಸುತ್ತಿರುವ ದೇಶ’ ಎಂದು ವರ್ಗೀಕರಿಸಿದೆ.

ಈ ಬೆಳವಣಿಗೆಯಿಂದಾಗಿ ಅಥ್ಲೀಟುಗಳು ಉದ್ದೀಪನ ಮದ್ದುಸೇವನೆ ತಡೆ ನಿಯಮಗಳಿಗೆ ಮೊದಲಿಗಿಂತ ಕಟ್ಟುನಿಟ್ಟಾಗಿ ಒಳಗಾಗಬೇಕಾಗುತ್ತದೆ.

ವಿಶ್ವ ಅಥ್ಲೆಟಿಕ್ಸ್ನ ಉದ್ದೀಪನ ಮದ್ದುಸೇವನೆ ತಡೆ ನಿಯಮಗಳ 15ನೇ ವಿಧಿಯಡಿ ಇಂಟೆಗ್ರಿಟಿ ಘಟಕವು, ಭಾರತ ಅಥ್ಲೆಟಿಕ್ಸ್ ಫೆಡರೇಷನ್ಅನ್ನು ‘ಬಿ’ ವಿಭಾಗದಿಂದ ‘ಎ’ ವಿಭಾಗಕ್ಕೆ (ಕೆಟಗರಿಗೆ) ಸೇರ್ಪಡೆ ಮಾಡಿದೆ.

‘ಭಾರತದಲ್ಲಿ ಉದ್ದೀಪನ ಮದ್ದು ಸೇವನೆ ಪರಿಸ್ಥಿತಿ ದೀರ್ಘಕಾಲದಿಂದ ಅಪಾಯಕಾರಿ ಮಟ್ಟದಲ್ಲಿಯೇ ಇದೆ. ಉದ್ದೀಪನ ಮದ್ದುಸೇವನೆ ಪ್ರಕರಣಗಳಿಗೆ ತಡೆಯೊಡ್ಡುವ ಯೋಜನೆಗಳ ಗುಣಮಟ್ಟ ದುರದೃಷ್ಟವಶಾತ್ ಪರಿಣಾಮಕಾರಿ ಯಾಗಿಲ್ಲ’ ಎಂದು ಎಐಯು ಮಂಡಳಿಯ ಮುಖ್ಯಸ್ಥ ಡೇವಿಡ್ ಹೌಮನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉದ್ದೀಪನ ಮದ್ದುಸೇವನೆ ತಡೆ ನಿಯಮಗಳಿಗೆ ಸಂಬಂಧಿಸಿ ಸುಧಾರಣೆ ತರಲು ಭಾರತ ಅಥ್ಲೆಟಿಕ್ ಫೆಡರೇಷನ್ ಯತ್ನಿಸಿದರೂ ಪ್ರಗತಿ ಗಮನಾರ್ಹವಾಗಿಲ್ಲ. ಈ ಹಿಂದೆ ‘ಎ’ ವಿಭಾಗದ ಇತರ ಸದಸ್ಯ ಫೆಡರೇಷನ್ಗಳ ಜೊತೆ ಕಾರ್ಯ ನಿರ್ವಹಿಸಿದಂತೆ, ಉದ್ದೀಪನ ಮದ್ದು ಪಿಡುಗಿಗೆ ಪರಿಣಾಮಕಾರಿ ಕ್ರಮಗಳ ಜಾರಿಗೆ ಭಾರತದ ಫೆಡರೇಷನ್ ಜೊತೆ ಎಐಯು ಕೈಜೋಡಿಸಲಿದೆ’ ಎಂದು ಅವರು ಹೇಳಿದ್ದಾರೆ.

2022 ರಿಂದ 2025ರ ಅವಧಿಯಲ್ಲಿ ಅಥ್ಲೆಟಿಕ್ಸ್ನಲ್ಲಿ ಡೋಪಿಂಗ್ ನಿಯಮಗಳ ಅತಿ ಹೆಚ್ಚು ಉಲ್ಲಂಘನೆಯಲ್ಲಿ ಭಾರತವು ವಿಶ್ವದ ಅಗ್ರ ಎರಡರಲ್ಲಿ ಸ್ಥಾನ ಪಡೆದಿದೆ.

ವಿಶ್ವ ಅಥ್ಲೆಟಿಕ್ಸ್ನ ಡೋಪಿಂಗ್ ನಿಗ್ರಹ ನಿಯಮಗಳಿಗೆ ಸಂಬಂಧಿಸಿ ಎಐಯು, ಮೂರು ವಿಭಾಗಗಳನ್ನು ಮಾಡಿದೆ. ಎ ವಿಭಾಗದಲ್ಲಿ ಅತಿ ಹೆಚ್ಚು ಅಪಾಯವಿರುವ ದೇಶಗಳ ಫೆಡರೇಷನ್ಗಳು ಇವೆ. ಬಿ ವಿಭಾಗದಲ್ಲಿ ಮಧ್ಯಮ ಪ್ರಮಾಣದ ರಿಸ್ಕ್ ಇರುವ ದೇಶಗಳು ಇವೆ. ಸಿ ವಿಭಾಗದ ಸದಸ್ಯ ಫೆಡರೇಷನ್ಗಳಲ್ಲಿ ಡೋಪಿಂಗ್ ಉಲ್ಲಂಘಿಸುವ ಪ್ರಕರಣಗಳು ತೀರಾ ಕಡಿಮೆ ಇರುತ್ತವೆ.

ಭಾರತದಲ್ಲಿ ಡೋಪಿಂಗ್ ನಿಯಮ ಉಲ್ಲಂಘಿಸಿ ಅಮಾನತುಗೊಂಡ 148 ಕ್ರೀಡಾಪಟುಗಳಿದ್ದಾರೆ. ಈ ವಿಷಯದಲ್ಲಿ ಭಾರತವು, ಅಗ್ರಸ್ಥಾನದಲ್ಲಿದ್ದ ಕೆನ್ಯಾವನ್ನು ಹಿಂದೆಹಾಕಿದೆ.

ಮೂರು ವರ್ಷಗಳಿಗೊಮ್ಮೆ ಎಐಯು ಮಂಡಳಿಯು ವಿಭಾಗಗಳಲ್ಲಿರುವ ಫೆಡರೇಷನ್ ಸ್ಥಾನಗಳ ಬಗ್ಗೆ ವಿವೇಚನೆಯ ಮೇರೆಗೆ ನಿರ್ಧಾರ ಕೈಗೊಳ್ಳುತ್ತದೆ.

ಎ ಕೆಟಗರಿಯಲ್ಲಿರುವ ಸದಸ್ಯ ಫೆಡರೇಷನ್, ನಿಯಮಗಳನ್ನು ಪರಿಣಾಮಕಾರಿ, ಚುರುಕಾಗಿ ಪಾಲಿಸ ಬೇಕಾಗುತ್ತದೆ. ವಾರ್ಷಿಕ ಪರೀಕ್ಷಾ ಯೋಜನೆಗಳ ವಿವರ ನಿರ್ವಹಣೆ ಮಾಡಬೇಕಾಗುತ್ತದೆ. ಅವುಗಳ ಅನುಷ್ಠಾನ ಅಂತರರಾಷ್ಟ್ರೀಯ ಮಟ್ಟದ ಲ್ಲಿರುವಂತೆ ನೋಡಿಕೊಳ್ಳಬೇಕಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-712736803

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.