ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಬೇಕು, ದೊಡ್ಡ ಮಟ್ಟದಲ್ಲಿ ಹೆಸರು ಮಾಡಬೇಕು ಎನ್ನುವುದು ಅದೆಷ್ಟೋ ಯುವಕ–ಯುವತಿಯರ ಕನಸು. ಆದರೆ ಅದ್ಯಾವುದೂ ಒಂದೇ ದಿನಕ್ಕೆ ಸಾಧ್ಯವಿಲ್ಲ. ಕಠಿಣ ಪರಿಶ್ರಮ, ದೇಹ ದಾರ್ಢ್ಯತೆ, ಮನೋಬಲ, ದೇಹವನ್ನು ಹುರಿಗೊಳಿಸಲು ವರ್ಷಗಳ ತರಬೇತಿ ಅಗತ್ಯವಾಗಿರುತ್ತದೆ. ಅಷ್ಟು ತಾಳ್ಮೆ, ಸಂಯಮ ಇಲ್ಲದವರು ಅಡ್ಡದಾರಿ ಮೂಲಕ ಯಶಸ್ಸು ಗಳಿಸಲು ಹೊರಟಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಉದ್ದೀಪನ ಮದ್ದು ಸೇವನೆಯಲ್ಲಿ (ಡೋಪಿಂಗ್) ಕೇನ್ಯಾವನ್ನು ಹಿಂದಿಕ್ಕಿ ಭಾರತ ನಂಬರ್ 1 ಸ್ಥಾನ ಪಡೆದುಕೊಂಡಿರುವುದು ಅದಕ್ಕೆ ತಾಜಾ ಉದಾಹರಣೆ. ವಿಶ್ವ ಅಥ್ಲೆಟಿಕ್ ಸಂಸ್ಥೆಯ ಅಥ್ಲೆಟಿಕ್ಸ್ ಸಮಗ್ರತಾ ಘಟಕ(ಎಐಯು) ವರದಿ ಪ್ರಕಾರ, ಡೋಪಿಂಗ್ ಪ್ರಕರಣದಲ್ಲಿ ಭಾರತದ 148 ಕ್ರೀಡಾಪಟುಗಳು ಅನರ್ಹಗೊಂಡಿದ್ದಾರೆ.

ಇದರಲ್ಲಿ ಅಗ್ರ ಅಥ್ಲೆಟ್ಗಳಾದ ದ್ಯುತೀ ಚಾಂದ್, ಶೇಕರ್ ಧನಲಕ್ಷ್ಮಿ, ಫರ್ವೇಜ್ ಖಾನ್ ಸೇರಿ ಪ್ರಮುಖರಿದ್ದಾರೆ. ಕೀನ್ಯಾದಲ್ಲಿ ಡೋಪಿಂಗ್ನಲ್ಲಿ ಸಿಕ್ಕಿಬಿದ್ದು ಅನರ್ಹಗೊಂಡ ಅಥ್ಲೆಟ್ಗಳ ಸಂಖ್ಯೆ 146 ಇದ್ದು, ಈ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ರಷ್ಯಾದಲ್ಲಿ 66 ಕ್ರೀಡಾಪಟುಗಳು ಅನರ್ಹಗೊಂಡಿದ್ದು, 3ನೇ ಸ್ಥಾನದಲ್ಲಿದೆ.

ಉದ್ದೀಪನ ಮದ್ದು ಸೇವನೆ ಮಾಡುವುದೇಕೆ?

ಕ್ರೀಡಾಪಟುಗಳು ತಮ್ಮ ವೇಗ, ಶಕ್ತಿ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸಿಕೊಳ್ಳಲು ಇವುಗಳನ್ನು ಬಳಸುತ್ತಾರೆ. ದೇಹದಾರ್ಢ್ಯ ಪಟುಗಳು ಅತಿ ವೇಗವಾಗಿ ಸ್ನಾಯುಗಳನ್ನು ಬೆಳೆಸಲು ಮತ್ತು ದೇಹದ ಬೊಜ್ಜನ್ನು ಕರಗಿಸಲು ಅನಾಬೊಲಿಕ್ ಸ್ಟೀರಾಯ್ಡ್ಗಳಂತಹ ಮದ್ದುಗಳನ್ನು ಬಳಸುತ್ತಾರೆ. ದೇಹದ ಮೇಲಿನ ಗಾಯ ಬೇಗ ವಾಸಿಯಾಗಬೇಕೆಂದೂ ಇದನ್ನು ಬಳಸುತ್ತಾರೆ.

ಆರೋಗ್ಯದ ಮೇಲೆ ಕೆಟ್ಟ ಪರಿಣಾಮ

ದೇಹದ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಸೇವಿಸುವ ಮದ್ದುಗಳು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು. ಮುಖ್ಯವಾಗಿ ಹೃದಯ ಸಂಬಂಧಿ ಕಾಯಿಲೆಗಳಾದ ರಕ್ತದೊತ್ತಡ, ಹೃದಾಯಾಘಾತದ ಅಪಾಯವೂ ಹೆಚ್ಚು.

ಮೂತ್ರಪಿಂಡವು ಶಾಶ್ವತವಾಗಿ ಹಾನಿಗೊಳಗಾಬಹುದು. ಮಾನಸಿಕವಾಗಿಯೂ ಕುಗ್ಗಿಸಿ ಖಿನ್ನತೆ, ನಿದ್ರಾಹೀನತೆ ಕಾಡುವ ಅಪಾಯವಿರುತ್ತದೆ. ಹಾರ್ಮೋನ್ ವ್ಯತ್ಯಾಸವಾಗಿ ಪುರಷರಲ್ಲಿ ನಪುಂಸಕತ್ವ ಮತ್ತು ಮಹಿಳೆಯರಲ್ಲಿ ಪುರುಷ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.

ಜಾಗೃತಿ ಅಗತ್ಯ

ಒಂದೇ ಪ್ರಯತ್ನದಲ್ಲಿ ಪದಕವನ್ನೇ ಗೆದ್ದುಬಿಡಬೇಕು ಎನ್ನುವ ಹುಮ್ಮಸ್ಸಿನ ಯುವ ಕ್ರೀಡಾಪಟುಗಳು ಅಡ್ಡದಾರಿ ಹಿಡಿಯುವುದು ಹೆಚ್ಚು. ಹೀಗಾಗಿ ಶಾಲಾಮಟ್ಟದಿಂದಲೇ ಈ ಕುರಿತು ಜಾಗೃತಿ ಆರಂಭವಾಗಬೇಕು. ದೈಹಿಕ ಶಿಕ್ಷಕರ ಮೂಲಕ ಮಕ್ಕಳಿಗೆ ಅರಿವು ಮೂಡಿಸಬೇಕಿದೆ. ದುಡ್ಡು, ಸೌಲಭ್ಯ, ನೌಕರಿ ಹೀಗೆ ಹಲವನ್ನು ಪಡೆಯಬೇಕು ಎನ್ನುವ ಆಸೆಯಿಂದ ಯಶಸ್ಸು ಸಾಧಿಸುವ ಹಾದಿಯಲ್ಲಿ ಎಡವಿದರೆ ಒಂದಿಲ್ಲೊಂದು ಹಂತದಲ್ಲಿ ಸಿಕ್ಕಿ ಬೀಳಬೇಕಾಗುತ್ತದೆ. ಏಕೆಂದರೆ ಮುಂದುವರಿದ ತಂತ್ರಜ್ಞಾನದ ಮೂಲಕ ನಡೆಯುವ ಪರೀಕ್ಷೆಯಲ್ಲಿ ಮದ್ದು ತೆಗೆದುಕೊಂಡಿರುವುದು ಪತ್ತೆಯಾಗುತ್ತದೆ. ಹೀಗಾಗಿ ನಿಷೇಧಿತ ಮದ್ದಿನ ಸೇವನೆ ಕ್ರೀಡಾಪಟುವಿನ ಬದುಕನ್ನೇ ನುಂಗುಬಲ್ಲದು ಎನ್ನುತ್ತಾರೆ ಡೋಪಿಂಗ್ ನಿಯಂತ್ರಣ ಅಧಿಕಾರಿಗಳು.

ಕುದುರೆಗಳಿಗೆ ಬಳಕೆ

ಡೋಪ್ ಎಂದರೆ ಒಂದು ನಿರ್ದಿಷ್ಟ ಆಹಾರ ಅಥವಾ ಸೇವನೆಯಿಂದ ಬರುವ ಶಕ್ತಿ. ಡೋಪಿಂಗ್ ಎನ್ನುವುದು ಅಫೀಮು ಮತ್ತು ಮಾದಕ ವಸ್ತುಗಳ ಮಿಶ್ರಣವಾಗಿದೆ. ಇದನ್ನು ಇಂಗ್ಲೆಂಡ್ನಲ್ಲಿ ಕುದುರೆ ಓಟಕ್ಕೆ ಬಳಸಲಾಗುತ್ತಿತ್ತು. ರೇಸ್ಟ್ರ್ಯಾಕ್ ಸವಾರಿಯ ಇತಿಹಾಸದಲ್ಲಿ, ರೇಸ್ ಕುದುರೆಗಳಿಗೆ ಶಕ್ತಿ ನೀಡಲು ಬಳಸುವ ಪದಾರ್ಥವಾಗಿದೆ. ಆದರೆ ವರ್ಷಗಳು ಕಳೆದಂತೆ ಮನುಷ್ಯರು ತಮ್ಮ ಶಕ್ತಿ ವೃದ್ಧಿಗೂ ಬಳಸುತ್ತಿದ್ದಾರೆ.

ಡೋಪಿಂಗ್ ಅಥವಾ ಉದ್ದೀಪನ ಮದ್ದು ಸೇವನೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.