ನವದೆಹಲಿ: ಚಂಡೀಗಢವು ಮುಂದಿನ ವರ್ಷದ ಮೇ ತಿಂಗಳಲ್ಲಿ ಏಷ್ಯನ್ ರಿಲೆ ಚಾಂಪಿಯನ್ಷಿಪ್ನ ಮತ್ತು ಭುವನೇಶ್ವರವು 2028ರ ಜನವರಿಯಲ್ಲಿ ಏಷ್ಯನ್ ಒಳಾಂಗಣ ಚಾಂಪಿಯನ್ಷಿಪ್ನ ಆತಿಥ್ಯ ವಹಿಸಲಿವೆ.

ಏಷ್ಯಾ ಅಥ್ಲೆಟಿಕ್ ಸಂಸ್ಥೆಯು (ಎಎಎ) ಹಾಂಗ್ಕಾಂಗ್ನಲ್ಲಿ ನಡೆದ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಭಾರತಕ್ಕೆ ಈ ಕೂಟಗಳ ಆತಿಥ್ಯವನ್ನು ಪ್ರಕಟಿಸಿತು. ಮೇ 28 ರಿಂದ 31ರವರೆಗೆ ನಡೆಯಲಿರುವ ಏಷ್ಯಾ 20 ವರ್ಷದೊಳಗಿನವರ ಅಥ್ಲೆಟಿಕ್ ಚಾಂಪಿಯನ್ಷಿಪ್ಗೆ ಪೂರ್ವಭಾವಿಯಾಗಿ ಎಎಎ ಸಭೆ ನಡೆಯಿತು. ಈ ಎರಡು ಚಾಂಪಿಯನ್ಷಿಪ್ಗಳನ್ನು ಇದೇ ಮೊದಲ ಬಾರಿ ಆಯೋಜಿಸುವ ಅವಕಾಶ ಭಾರತಕ್ಕೆ ದೊರೆತಿದೆ.

‘ಈ ಚಾಂಪಿಯನ್ಷಿಪ್ನ ಆತಿಥ್ಯ ಭಾರತಕ್ಕೆ ವಹಿಸಿರುವುದು ಹೆಮ್ಮೆಯ ವಿಷಯ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ವಿಶ್ವ ಅಥ್ಲೆಟಿಕ್ಸ್ ಉಪಾಧ್ಯಕ್ಷ ಅದಿಲ್ ಸುಮರಿವಾಲಾ ಸುದ್ದಿಸಂಸ್ಥೆಗೆ ತಿಳಿಸಿದರು. ಈ ಎರಡು ಕೂಟಗಳನ್ನು ವಹಿಸಿಕೊಳ್ಳಲು ಭಾರತ ಆಸಕ್ತಿ ತೋರಿಸಿದ್ದು, ಕಳೆದ ವರ್ಷ ಬಿಡ್ ಸಲ್ಲಿಸಿತ್ತು

ಏಷ್ಯನ್ ರಿಲೇ ಚಾಂಪಿಯನ್ಷಿಪ್ ಮೂರನೇ ಬಾರಿ ನಡೆಯಲಿದೆ. ಇದರಲ್ಲಿ ಆರು ಸ್ಪರ್ಧೆಗಳು– ಪುರುಷರ 4x100 ಮೀ., 4x400 ಮೀ. ರಿಲೆ, ಮಹಿಳೆಯರ 4x100 ಮೀ., 4x400 ಮೀ. ರಿಲೇ ಮತ್ತು ಮಿಶ್ರ ವಿಭಾಗದಲ್ಲಿ 4x100 ಮೀ., 4x400 ಮೀ. ರಿಲೆ ಸ್ಪರ್ಧೆಗಳು ನಿಗದಿಯಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.