ಮಂಗಳೂರು: ಅಮೋಘ ಆಟದ ಮೂಲಕ ಅಜೇಯರಾಗಿ ಉಳಿದ ಚೆನ್ನೈನ ವಲೈ ತಂಡ ಇಂಡಿಯಾ ಅಲ್ಟಿಮೇಟ್ ಬೀಚ್ ನ್ಯಾಷನಲ್ಸ್ನ ಮಹಿಳೆಯರ ವಿಭಾಗದ ‘ಸ್ವಿಸ್’ನ ಮೂರನೇ ಸುತ್ತಿನ ಅಂತ್ಯಕ್ಕೆ ಅಗ್ರಸ್ಥಾನ ಗಳಿಸಿತು. ಬೆಂಗಳೂರಿನ ಏರ್ ಬೆಂಡರ್ಸ್ ಒನ್, ತಮಿಳುನಾಡಿನ ಕ್ರ್ಯಾಷ್ ಮತ್ತು ಒಡಿಶಾದ ಅಲ್ಟಿಮೇಟ್ ಟರ್ಟಲ್ಸ್ ತಂಡಗಳು ಎರಡನೇ ಸ್ಥಾನವನ್ನು ಹಂಚಿಕೊಂಡಿವೆ.

ಇಂಡಿಯಾ ಅಲ್ಟಿಮೇಟ್ ಸಹಯೋಗದಲ್ಲಿ ಕರ್ನಾಟಕ ಅಲ್ಟಿಮೇಟ್ ಪ್ಲೇಯರ್ಸ್ ಅಸೋಸಿಯೇಷನ್ (ಕೆಯುಪಿಎ) ನಗರದ ತಣ್ಣೀರುಬಾವಿಯ ಬ್ಲೂ ಬೇ ಇಕೊ ಬೀಚ್ನಲ್ಲಿ ಆಯೋಜಿಸಿರುವ ಟೂರ್ನಿಯಲ್ಲಿ ವಲೈ ತಂಡ ಶನಿವಾರ ನಡೆದ ಮೂರೂ ಸುತ್ತುಗಳಲ್ಲಿ ಜಯ ಸಾಧಿಸಿತು.

ಬೆಳಿಗ್ಗೆ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಲೈ 10–7ರಲ್ಲಿ ಕ್ರ್ಯಾಷ್ ವಿರುದ್ಧ ಜಯ ಸಾಧಿಸಿತು. ಚೆನ್ನೈನ ಕಲ್ಲಹನ್ಸ್ ತಂಡವನ್ನು 11–5ರಲ್ಲಿ ಮತ್ತು ಬೆಂಗಳೂರಿನ ಲರ್ನಿಂಗ್ ಟು ಫ್ಲೈ ತಂಡವನ್ನು 13–3ರಲ್ಲಿ ಮಣಿಸಿತು. ಏರ್ ಬೆಂಡರ್ಸ್, ಕ್ರ್ಯಾಷ್ ಮತ್ತು ಅಲ್ಟಿಮೇಟ್ ತಂಡಗಳು ತಲಾ 4 ಪಾಯಿಂಟ್ಗಳನ್ನು ಕಲೆ ಹಾಕಿತು. ಏರ್ ಬೆಂಡರ್ಸ್ 11–5ರಲ್ಲಿ ಕಲ್ಲಹನ್ಸ್ ವಿರುದ್ಧ ಮತ್ತು 11–1ರಲ್ಲಿ ಲರ್ನಿಂಗ್ ಟು ಫ್ಲೈ ವಿರುದ್ಧ ಗೆದ್ದರೆ, ಕ್ರ್ಯಾಷ್ 10–4ರಲ್ಲಿ ಬೆಂಗಳೂರಿನ ಲರ್ನಿಂಗ್ ಲಟ್ಟೆ ವಿರುದ್ಧ ಹಾಗೂ 10–5ರಲ್ಲಿ ಕೊಯಮತ್ತೂರಿನ ಖಿಚಡಿ ವಿರುದ್ಧ ಗೆದ್ದಿತು. ಅಲ್ಟಿಮೇಟ್ 9–5ರಲ್ಲಿ ಖಿಚಡಿ ಎದುರು ಹಾಗೂ 12-2ರಲ್ಲಿ ಕುಡ್ಲ ಕೈ ಎದುರು ಜಯ ಸಾಧಿಸಿತು.

ಸ್ಟಾಲ್ 7ಗೆ ಅಗ್ರ ಸ್ಥಾನ

ಪುರುಷರ ವಿಭಾಗದ ಸ್ವಿಸ್ನ ಎಲ್ಲ ನಾಲ್ಕು ಸುತ್ತುಗಳ ಮುಕ್ತಾಯಕ್ಕೆ ಚೆನ್ನೈನ ಸ್ಟಾಲ್ ಸೆವೆನ್ 8 ಪಾಯಿಂಟ್ಗಳೊಂದಿಗೆ ಅಗ್ರಸ್ಥಾನಕ್ಕೇರಿದ ಏಕೈಕ ತಂಡ ಎನಿಸಿಕೊಂಡಿತು. ಸ್ವಿಸ್ ‘ಬಿ’ಯಲ್ಲಿ ಸ್ಥಾನ ಗಳಿಸಿರುವ ತಂಡ ಶುಕ್ರವಾರದ ಮೂರು ಪಂದ್ಯಗಳನ್ನು ಗೆದ್ದುಕೊಂಡಿತ್ತು. ಶನಿವಾರ 13–6ರಲ್ಲಿ ಗೋವಾದ ಡೆಡ್ಪುಲ್ ತಂಡವನ್ನು ಮಣಿಸಿತು. ಕಲ್ಲಹನ್ಸ್ ಓಪನ್ಸ್ 6 ಪಾಯಿಂಟ್ಗಳನ್ನು ಗಳಿಸಿತು. ಸ್ವಿಸ್ ‘ಎ’ಯಲ್ಲಿ ಹಯೆನ್ಸ್ ಏರ್ಬೋರ್ನ್, ಏರ್ಬೆಂಡರ್ಸ್ ಒನ್, ಪುಯಲ್ ಮತ್ತು ದಬಕಿ ತಂಡಗಳು ತಲಾ 6 ಪಾಯಿಂಟ್ ಗಳಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.