ನವದೆಹಲಿ: ಭಾರತದ ಅಥ್ಲೀಟ್ ಸ್ನೇಹಾ ಕೊಲ್ಲೇರಿ ಅವರು ಹೋದ ವರ್ಷ ನಡೆಸಿದ್ದ ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಅದ್ದರಿಂದ ಅವರ ಮೇಲೆ ಮೂರು ವರ್ಷಗಳ ನಿಷೇಧ ವಿಧಿಸಲಾಗಿದ್ದು, ಏಷ್ಯನ್ ಚಾಂಪಿಯನ್ಷಿಪ್ ಟೂರ್ನಿಯಲ್ಲಿ ಸ್ಪರ್ಧಿಸುವ ತಂಡದಿಂದ ಕೈಬಿಡಲಾಗಿದೆ.

ಚಂಡೀಗಡದಲ್ಲಿ ಈ ಹಿಂದೆ ಅವರಿಂದ ಪರೀಕ್ಷೆಗಾಗಿ ಮಾದರಿಯನ್ನು ಸಂಗ್ರಹಿಸಲಾಗಿತ್ತು. ದೆಹಲಿಯಲ್ಲಿ ಮಾಡಿದ್ದ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ಬಂದಿತ್ತು. ಆದರೆ ನಂತರದ ಮತ್ತೊಂದು ಟೆಸ್ಟ್ನಲ್ಲಿ ಅನಾಬೊಲಿಕ್ ಸ್ಟೆರಾಯ್ಡ್ ಸ್ಟಾನೊಝೊಲೊಲ್ ಸೇವನೆಯು ದೃಢಪಟ್ಟಿತ್ತು. ಅದಕ್ಕಾಗಿ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು.

ಕಲಬೆರಕೆಯಾದ ಶಕ್ತಿವರ್ಧಕ ಪೇಯ ಸೇವಿಸಿದ್ದರಿಂದ ಈ ರೀತಿಯ ಫಲಿತಾಂಶ ಬಂದಿದೆ ಎಂದು ಸ್ನೇಹಾ ಅವರು ನೀಡಿದ್ದ ಸ್ಪಷ್ಟನೆಯನ್ನು ಅಥ್ಲೆಟಿಕ್ಸ್ ಇಂಟಿಗ್ರಿಟಿ ಯೂನಿಟ್ (ಎಐಯು) ತಳ್ಳಿಹಾಕಿತ್ತು.

ಕೊಚ್ಚಿಯ 26 ವರ್ಷದ ಸ್ನೇಹಾ ಅವರ ಮಾದರಿಯನ್ನು ಮೇ 10ರಂದು ಗುವಾಂಗ್ಜುವಿನಲ್ಲಿ ಸಂಗ್ರಹಿಸಲಾಗಿತ್ತು. ಸಾಲು ಸಾಲು ಪರೀಕ್ಷೆಗಳ ನಂತರವೂ ನೆಗೆಟಿವ್ ಎಂದು ತೋರಿಸಿದ್ದರಿಂದ ಭಾರತಕ್ಕೆ ತಂದು ಪರಿಶೀಲನೆ ಮಾಡಲಾಯಿತು. ಅದರಲ್ಲಿ ನಿಷೇಧಿತ ಮದ್ದು ಸ್ಟಾನೊಝೊಲೊಲ್ ಇರುವುದು ದೃಢಪಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.