ಬೆಂಗಳೂರು: ‘ಸುಮಾರು ಒಂದು ದಶಕದಿಂದ ಭಾರತದ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದೆ. ಅಥ್ಲೀಟುಗಳ ಪ್ರದರ್ಶನದಲ್ಲೂ ಸಾಕಷ್ಟು ಸುಧಾರಣೆಯಾಗಿದೆ. ನನ್ನಿಂದ ಯಾವುದೇ ನೆರವು ಬೇಕಾದರೆ ನೀಡಲು ಸಿದ್ಧಳಾಗಿದ್ದೇನೆ’ ಎಂದು ಎರಡು ಬಾರಿ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದಿರುವ ಹೈಜಂಪ್ ತಾರೆ ಬ್ಲಾಂಕಾ ವ್ಲಾಸಿಕ್ ಹೇಳಿದರು.

ಟಿಸಿಎಸ್ ವಿಶ್ವ 10ಕೆ ಬೆಂಗಳೂರು ಓಟದ ಅಂತರರಾಷ್ಟ್ರೀಯ ರಾಯಭಾರಿ ಆಗಿರುವ ವ್ಲಾಸಿಕ್ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. 42 ವರ್ಷ ವಯಸ್ಸಿನ ವ್ಲಾಸಿಕ್ ಎರಡು ಬಾರಿಯ ವಿಶ್ವ ಚಾಂಪಿಯನ್ (2007, 2009) ಕೂಡ.

‘ಕ್ರೀಡೆ ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಇದು ದೈಹಿಕ ಕ್ಷಮತೆಗೆ ಮಾತ್ರವಲ್ಲ, ಮಾನಸಿಕ ಆರೋಗ್ಯ ಕಾಪಾಡಲೂ ನೆರವಾಗುತ್ತದೆ’ ಎಂದು ಕ್ರೊವೇಷ್ಯಾದ ಕ್ರೀಡಾತಾರೆ ಹೇಳಿದರು.

2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ಭಾರತ ಬಿಡ್ ಸಲ್ಲಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಒಲಿಂಪಿಕ್ಸ್ ಆಯೋಜಿಸುವುದು ಒಂದು ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ದೇಶದ ಕ್ರೀಡಾ ಬೆಳವಣಿಗೆಗೆ ವೇಗ ನೀಡುತ್ತದೆ. ಪ್ರತಿಭಾವಂತ ಕ್ರೀಡಾಪಟುಗಳನ್ನು ರೂಪಿ ಸಲೂ ಇದರಿಂದ ಸಾಧ್ಯ’ ಎಂದರು.

ಭಾನುವಾರದ ಈ ಕೂಟದಲ್ಲಿ ಸುಮಾರು 36,000 ಮಂದಿ ಭಾಗವಹಿಸಲಿದ್ದಾರೆ. ಇವರಲ್ಲಿ 9,000 ಮಹಿಳೆಯರು ಒಳಗೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-4-1134925352

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.