ನವದೆಹಲಿ: ಭಾರತದ ಬಾಕ್ಸಿಂಗ್ಪಟುಗಳಾದ ಪ್ರೀತಿ ಪವಾರ್, ಪ್ರಿಯಾ, ಅರುಂಧತಿ ಚೌಧರಿ ಮತ್ತು ಸಚಿನ್ ಅವರನ್ನು ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಗೆ (ಟಾಪ್ಸ್) ಸೇರ್ಪಡೆಗೊಳಿಸಲಾಗಿದೆ. ಈ ನಾಲ್ಕು ಮಂದಿ ಇತ್ತೀಚೆಗೆ ಏಷ್ಯನ್ ಬಾಕ್ಸಿಂಗ್ ಎಲೀಟ್ ಚಾಂಪಿಯನ್ಷಿಪ್ ನಲ್ಲಿ ಸ್ಫೂರ್ತಿಯುತ ಪ್ರದರ್ಶನ ನೀಡಿದ್ದರು.

ಮಿಷನ್ ಒಲಿಂಪಿಕ್ ಸೆಲ್ನ (ಎಂಒಸಿ) 172ನೇ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು. ಮೂವರು ಬಾಕ್ಸಿಂಗ್ ಪಟುಗಳನ್ನು ‘ಟಾಪ್ಸ್ ಡೆವಲಪ್ಮೆಂಟ್’ ಗುಂಪಿಗೆ ಸೇರ್ಪಡೆ ಮಾಡಲಾಗಿದೆ.

ಪ್ರೀತಿ (54 ಕೆ.ಜಿ ಕ್ಲಾಸ್), ಪ್ರಿಯಾ (60 ಕೆ.ಜಿ) ಮತ್ತು ಅರುಂಧತಿ (70 ಕೆ.ಜಿ.) ಅವರು ಮಂಗೋಲಿಯಾದ ಉಲಾನ್ಬತಾರ್ನಲ್ಲಿ ಈ ತಿಂಗಳ ಆರಂಭದಲ್ಲಿ ನಡೆದ ಚಾಂಪಿಯನ್ಷಿಪ್ನಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಸಚಿನ್ ಪುರುಷರ 60 ಕೆ.ಜಿ. ಕ್ಲಾಸ್ನಲ್ಲಿ ಬೆಳ್ಳಿ ಜಯಿಸಿದ್ದರು.

ಕ್ರೀಡಾಪಟುಗಳ ಇತ್ತೀಚಿನ ಫಲಿತಾಂಶಗಳ ಮೌಲ್ಯಮಾಪನ, ವಿಶ್ವ ರ್ಯಾಂಕಿಂಗ್ ಮತ್ತು ಅವರು ಸಾಧಿಸಿರುವ ಪ್ರಗತಿಯ ಆಧಾರದಲ್ಲಿ ಟಾಪ್ಸ್ ಯೋಜನೆಯಡಿ ಬರುವ ಕ್ರೀಡಾಪಟುಗಳ ಪರಾಮರ್ಶೆಯನ್ನು ಎಂಒಸಿ ಮಾಡುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-51-711289504

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.