ಡಸೆಲ್‌ಡಾರ್ಫ್, ಜರ್ಮನಿ: ಭಾರತದ ಜೂನಿಯರ್ ಹಾಕಿ ತಂಡವು ನಾಲ್ಕು ರಾಷ್ಟ್ರಗಳ ಹಾಕಿ ಟೂರ್ನಿಯಲ್ಲಿ ಆತಿಥೇಯ ತಂಡದ ವಿರುದ್ಧ 2–3ರಿಂದ ಪರಾಭವಗೊಂಡಿತು.
ಮೊದಲ ಪಂದ್ಯದಲ್ಲಿ ಸ್ಪೇನ್ ತಂಡವನ್ನು 6–2 ಗೋಲುಗಳಿಂದ ಮಣಿಸಿದ್ದ ಭಾರತದ ಆಟಗಾರರು, ಶನಿವಾರ ತಡರಾತ್ರಿ ನಡೆದ ಎರಡನೇ ಪಂದ್ಯದಲ್ಲಿ ಮುಗ್ಗರಿಸಿದರು.
ಭಾರತದ ಸುದೀಪ್ ಚಿರ್ಮಾಕೊ (7 ಮತ್ತು 60ನೇ) ಎರಡು ಗೋಲು ಗಳಿಸಿ ಮಿಂಚಿದರು. ಮೈಕೆಲ್ ಸ್ಟ್ರುಥಾಫ್ (41ನೇ), ಬೆನ್ ಹ್ಯಾಸ್‌ಬಾಚ್ (53ನೇ) ಮತ್ತು ಫ್ಲೋರಿಯನ್ ಸ್ಪೆರ್ಲಿಂಗ್ (55ನೇ) ಚೆಂಡನ್ನು ಗುರಿ ಸೇರಿಸಿ ಜರ್ಮನಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತವು ಸೋಮವಾರ ಇಂಗ್ಲೆಂಡ್ ತಂಡದ ಸವಾಲನ್ನು ಎದುರಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.