ಮಂಗಳೂರು: ಕನ್ನಡಿಗ, ಕೇರಳದಲ್ಲಿ ನೆಲೆಸಿರುವ ರಮೇಶ ಬೂದಿಹಾಳ ಅವರು ಎನ್ಎಂಪಿಎ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಚಾಂಪಿಯನ್ಷಿಪ್ನ ಪುರುಷರ ಮುಕ್ತ ವಿಭಾಗದಲ್ಲಿ ಶನಿವಾರ ಅತ್ಯಧಿಕ ಸ್ಕೋರ್ ಸಾಧನೆಯೊಂದಿಗೆ ಸೆಮಿಫೈನಲ್ ಪ್ರವೇಶಿಸಿದರು.

ಭಾರತ ಸರ್ಫಿಂಗ್ ಫೆಡರೇಷನ್, ನಗರದ ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಷನ್ ಸಹಯೋಗದಲ್ಲಿ ತಣ್ಣೀರುಬಾವಿ ಕಡಲಿನಲ್ಲಿ ಆಯೋಜಿಸಿರುವ ಚಾಂಪಿಯನ್ಷಿಪ್ನ 18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಮಂಗಳೂರಿನ ಸಾನ್ವಿ ಹೆಗ್ಡೆ ಮತ್ತು ತಮಿಳುನಾಡಿನ ಕಮಲಿ ಮೂರ್ತಿ ಫೈನಲ್ಗೆ ಲಗ್ಗೆ ಇರಿಸಿದರು.

ಶನಿವಾರ ಅಲೆಗಳ ಅಬ್ಬರ ತುಸು ಜೋರಾಗಿತ್ತು. ಈ ಸವಾಲನ್ನು ಕೆಚ್ಚೆದೆಯಿಂದ ಎದುರಿಸಿದ ರಮೇಶ ಬೂದಿಹಾಳ ಕ್ವಾರ್ಟರ್ ಫೈನಲ್ನ ಮೊದಲ ಹೀಟ್ಸ್ನಲ್ಲಿ ಕಡಲಿಗೆ ಇಳಿದಿದ್ದರು. ಗರಿಷ್ಠ 7 ಪಾಯಿಂಟ್ಗಳೊಂದಿಗೆ ಒಟ್ಟು 14.83 ಸ್ಕೋರು ಗಳಿಸಿದ ಅವರು ನಿರಾಯಾಸವಾಗಿ ಸೆಮಿಫೈನಲ್ಗೆ ತಲುಪಿದರು. ಎರಡನೇ ಹೀಟ್ಸ್ನಲ್ಲಿ ಕಿಶೋರ್ ಕುಮಾರ್ ಗರಿಷ್ಠ 7.33 ಪಾಯಿಂಟ್ಗಳೊಂದಿಗೆ 11.80 ಸ್ಕೋರು ಮಾಡಿದರು. ಇದಕ್ಕೂ ಮೊದಲು ನಡೆದ ಎರಡನೇ ಸುತ್ತಿನ ಹೀಟ್ಸ್ನಲ್ಲಿ ಕಿಶೋರ್ 14.17 ಸ್ಕೋರು ಗಳಿಸಿದ್ದರು. ಈ ಸುತ್ತಿನಲ್ಲಿ ಬೂದಿಹಾಳ (13) 3ನೇ ಸ್ಥಾನದಲ್ಲಿದ್ದರು. ಶ್ರೀಕಾಂತ್ ಡಿ (13), ಅಜೀಶ್ ಅಲಿ (9.93), ಸಂಜಯ್ ಸೆಲ್ವಮಣಿ (9.57) ಮತ್ತು ಶಿವರಾಜ್ ಬಾಬು (8.76) ಕೂಡ ಸೆಮಿಫೈನಲ್ ಪ್ರವೇಶಿಸಿದರು.

ಸಾನ್ವಿ ಫೈನಲ್ಗೆ

ಮಹಿಳೆಯರ ವಿಭಾಗದಲ್ಲಿ ಮೊದಲ ದಿನ ಸೆಮಿಫೈನಲ್ ಪ್ರವೇಶಿಸಿರುವ ಮಂಗಳೂರಿನ ಸಾನ್ವಿ ಹೆಗ್ಡೆ ಮತ್ತು ತಮಿಳುನಾಡಿನ ಕಮಲಿ ಮೂರ್ತಿ 18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಶನಿವಾರ ಫೈನಲ್ ತಲುಪಿದರು. ಮಹಿಳಾ ವಿಭಾಗದಲ್ಲಿ 13.83 ಸ್ಕೋರು ಗಳಿಸಿದ್ದ ಕಮಲಿ 18 ವರ್ಷದೊಳಗಿನವರ ವಿಭಾಗದಲ್ಲಿ 12.44ರ ಸಾಧನೆ ಮಾಡಿದರು. ಆದ್ಯಾ ಸಿಂಗ್ (7.50) ಮತ್ತು ದಮಯಂತಿ ಶ್ರೀರಾಮ್ (4.27) ಕೂಡ ಫೈನಲ್ನಲ್ಲಿ ಸ್ಥಾನ ಗಳಿಸಿದ್ದಾರೆ.

18 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮಂಗಳೂರಿನ ಪ್ರದೀಪ್ ಪೂಜಾರ (6.56) ಸೆಮಿಫೈನಲ್ ಪ್ರವೇಶಿಸಿದರು. ಹರೀಶ್ ಪಿ (13.60) ಈ ವಿಭಾಗದಲ್ಲಿ ಗರಿಷ್ಠ ಸ್ಕೋರು ಗಳಿಸಿದರು. ತಯಿನ್ ಅರುಣ್ (12.67), ಸೋಮ್ ಸೇಥಿ (12), ಯೋಗೇಶ್ ಎ (11.34) ಮತ್ತು ಪ್ರಹ್ಲಾದ್ ಶ್ರೀರಾಮ್ ಅವರೂ ಸೆಮಿಫೈನಲ್ನಲ್ಲಿ ಸ್ಪರ್ಧಿಸಲಿದ್ದಾರೆ. ಹೊಸದಾಗಿ ಸೇರ್ಪಡೆಯಾದ 14 ವರ್ಷದೊಳಗಿವನವರ ವಿಭಾಗದಲ್ಲಿ ಹರೀಶ್ ಪಿ (14.40), ಶೇಕ್ ದಾವೂದ್ (13), ಯೋಗೇಶ್ ಎ (9.40), ಪ್ರಹ್ಲಾದ್ ಶ್ರೀರಾಮ್ (7.27), ದಮಯಂತಿ ಶ್ರೀರಾಮ್ (9.50), ಸವಿತಾ ಕುಂದರ್ (5.10) ಅರಬೋಳು ನೇತ್ರ (1) ಮತ್ತು ಗೌರಿ(0.5) ಫೈನಲ್ ಪ್ರವೇಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.