ಪರ್ತ್: ಭಾರತ ತಂಡವು ಸೌಹಾರ್ದ ಹಾಕಿ ಸರಣಿಯ ಎರಡನೇ ಪಂದ್ಯದಲ್ಲಿ ಬುಧವಾರ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಹಿನ್ನಡೆಯಿಂದ ಚೇತರಿಸಿ 1–1 ಡ್ರಾ ಸಾಧಿಸಿತಲ್ಲದೇ, ಅಂತಿಮವಾಗಿ ಶೂಟೌಟ್ನಲ್ಲಿ 4–2 ರಿಂದ ಜಯಗಳಿಸಿತು. ಇದರಿಂದ ನಾಲ್ಕು ಪಂದ್ಯಗಳ ಸರಣಿ ಈಗ 1–1 ರಲ್ಲಿ ಸಮನಾಗಿದೆ.

ಪರ್ತ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಒಲಿವಾ ಡೌನೆಸ್ (10ನೇ ನಿಮಿಷ) ಆತಿಥೇಯರಿಗೆ ಮುನ್ನಡೆ ಒದಗಿಸಿದರು. ಆದರೆ ವಿರಾಮದ ಬಳಿಕ ಸುಶೀಲಾ ಚಾನು ಪುಖ್ರಂಬಾಮ್ (46ನೇ ನಿಮಿಷ) ಭಾರತ ಸಮ ಮಾಡಲು ನೆರವಾದರು.

ಶೂಟೌಟ್ನಲ್ಲಿ ನವನೀತ್ ಕೌರ್, ಇಶಿಕಾ ಚೌಧರಿ, ಅನ್ನು ಮತ್ತು ಋತುಜಾ ದಾದಸೊ ಪಿಸಾಳ್ ಸ್ಕೋರ್ ಮಾಡಿದರು.

ಶುಕ್ರವಾರ ಸರಣಿಯ ಮೂರನೇ ಪಂದ್ಯ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.