ಲೂಸಾನ್ (ಸ್ವಿಟ್ಜರ್ಲೆಂಡ್): ಜೂನ್ 15ರಿಂದ 21ರವರೆಗೆ ನ್ಯೂಜಿಲೆಂಡ್ನ ಆಕ್ಲೆಂಡ್ನಲ್ಲಿ ನಡೆಯಲಿರುವ ಎಫ್ಐಎಚ್ ಹಾಕಿ ನೇಷನ್ಸ್ ಕಪ್ನಲ್ಲಿ ಭಾರತ ವನಿತೆಯರ ತಂಡ ಕಣಕ್ಕಿಳಿಯಲಿದೆ.

ಭಾರತ ತಂಡವು ಕಳೆದ ಆವೃತ್ತಿಯ ಪ್ರೊ ಲೀಗ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಎಫ್ಐಎಚ್ನ ಎರಡನೇ ಸ್ತರವಾದ ಎಫ್ಐಎಚ್ ನೇಷನ್ಸ್ ಕಪ್ಗೆ ಹಿಂಬಡ್ತಿ ಪಡೆದಿತ್ತು. 2024-25ರ ಪ್ರೊ ಲೀಗ್ನ ಅಂಕಪಟ್ಟಿಯಲ್ಲಿ ಒಂಬತ್ತು ತಂಡಗಳ ಪೈಕಿ ಭಾರತ ಕೊನೆಯ ಸ್ಥಾನ ಪಡೆದಿತ್ತು.

2021ರಲ್ಲಿ ನೇಷನ್ಸ್ ಕಪ್ ಟೂರ್ನಿ ಆರಂಭಿಸಲಾಗಿತ್ತು. ಇದರ ವಿಜೇತ ತಂಡವು ಮುಂದಿನ ಋತುವಿಗೆ ಪ್ರೊ ಲೀಗ್ಗೆ ಅರ್ಹತೆ ಪಡೆಯುತ್ತದೆ. ಭಾರತದೊಂದಿಗೆ ಆತಿಥೇಯ ನ್ಯೂಜಿಲೆಂಡ್, ಅಮೆರಿಕ, ಜಪಾನ್, ಕೊರಿಯಾ, ಚಿಲಿ, ಸ್ಕಾಟ್ಲೆಂಡ್ ಮತ್ತು ಫ್ರಾನ್ಸ್ ತಂಡಗಳು ಟೂರ್ನಿಯಲ್ಲಿವೆ.

ಪುರುಷರ ಟೂರ್ನಿಯು ಕೇಪ್ಟೌನ್ನಲ್ಲಿ ನಡೆಯಲಿದೆ. ಅದರಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಫ್ರಾನ್ಸ್, ಕೊರಿಯಾ, ಜಪಾನ್, ವೇಲ್ಸ್, ಮಲೇಷ್ಯಾ ಜೊತೆಗೆ ಹಾಕಿ ಪ್ರೊ ಲೀಗ್ನಿಂದ ಹಿಂಬಡ್ತಿ ಪಡೆದ ಐರ್ಲೆಂಡ್, ‘ಹಾಕಿ ನೇಷನ್ಸ್ ಕಪ್ 2’ ಮೂಲಕ ಬಡ್ತಿ ಪಡೆದ ಸ್ಕಾಟ್ಲೆಂಡ್ ತಂಡಗಳು ಸ್ಪರ್ಧಿಸಲಿವೆ. ಈ ಟೂರ್ನಿಯು ಜೂನ್ 11ರಿಂದ 20 ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.