‘ಬಲಿಷ್ಠ ಅರ್ಜೆಂಟೀನಾ ಎದುರಿನ ಸರಣಿಯನ್ನು ಸಮಬಲ ಸಾಧಿಸಿರುವುದು ತಮ್ಮ ಆಟಗಾರ್ತಿಯರ ಆತ್ಮವಿಶ್ವಾಸ ಹೆಚ್ಚಿಸಿದೆ. ಅನುಭವಿಗಳು ಹಾಗೂ ಹೊಸ ಮುಖಗಳ ಮಿಶ್ರಣ ಹೊಂದಿರುವ ತಂಡವು ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲು ಉತ್ಸುಕವಾಗಿದೆ’ ಎಂದು ಭಾರತ ತಂಡದ ನಾಯಕಿ ಸಲೀಮಾ ಟೆಟೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಟ್ರೇಲಿಯಾ ವಿರುದ್ಧ ಸರಣಿ ಜಯಿಸುವುದು ನಮ್ಮ ಮೊದಲ ಗುರಿ. ಆ ನಂತರ ನೇಷನ್ಸ್ ಕಪ್ ಗೆದ್ದು ಪ್ರೊ ಲೀಗ್ಗೆ ಅರ್ಹತೆ ಪಡೆಯುವ ಸವಾಲು ನಮ್ಮೆದುರಿಗೆ ಇದೆ. ಕೋಚ್ ಸ್ಯೋರ್ಡ್ ಮರಿನ್ ಅವರ ಮಾರ್ಗದರ್ಶನದಲ್ಲಿ ಈ ಹಿಂದೆಯೂ (2017ರಿಂದ 2021) ಆಡಿದ್ದೆ. ಅವರು ಮತ್ತೆ ತಂಡದ ಕೋಚ್ ಆಗಿ ಮರಳಿದ್ದು ಅವರ ಮಾರ್ಗದರ್ಶನದಲ್ಲಿ ಉನ್ನತ ಸಾಧನೆ ಮಾಡಲು ಎದುರು ನೋಡುತ್ತಿದ್ದೇವೆ’ ಎಂದರು.

‘ಆಸ್ಟ್ರೇಲಿಯಾ ಪ್ರವಾಸದ ಪೂರ್ವಾಭ್ಯಾಸಕ್ಕಾಗಿ ಬೆಂಗಳೂರಿನ ‘ಸಾಯ್’ನಲ್ಲಿ ನಡೆದ ಶಿಬಿರದಲ್ಲಿ ಅನುಭವಿ ಆಟಗಾರ್ತಿಯರು ಹಾಗೂ ಉದಯೋನ್ಮುಖ ಆಟಗಾರ್ತಿಯರು ಜೊತೆಯಾಗಿ ಕಠಿಣ ಅಭ್ಯಾಸ ನಡೆಸಿದ್ದೇವೆ. ಈ ಸರಣಿಯು ನಮ್ಮ ತಂತ್ರಗಳನ್ನು ಪರೀಕ್ಷೆಗೊಡ್ಡಲು ಮತ್ತು ನಾವು ಉತ್ತಮ ತಂಡವಾಗಿ ರೂಪುಗೊಳ್ಳಲು ಅವಕಾಶ ಒದಗಿಸಲಿದೆ’ ಎಂದು ಹೇಳಿದರು.

‘ಅನುಭವಿಗಳೊಂದಿಗೆ ಆಡುವುದು ನಮ್ಮ ಕೌಶಲ ವೃದ್ಧಿಗೆ ಪೂರಕ. ಅವರು ನಮಗೆ ಸ್ಪೂರ್ತಿ ತುಂಬುತ್ತಾರೆ. ಒತ್ತಡದ ಸಂದರ್ಭದಲ್ಲಿ ಹೇಗೆ ಆಡಬೇಕು ವೈಫಲ್ಯಗಳನ್ನು ಹೇಗೆ ಮೆಟ್ಟಿನಿಲ್ಲಬೇಕೆಂಬುದರ ಬಗ್ಗೆ ಪ್ರೇರಣೆ ನೀಡುತ್ತಾರೆ’ ಎಂದು ಸುಂದರಗಢದ 19 ವರ್ಷ ವಯಸ್ಸಿನ ಆಟಗಾರ್ತಿ ಸುನೆಲಿತಾ ಟೊಪ್ಪೊ ತಿಳಿಸಿದರು. ‘ಕಿರಿಯ ವಯಸ್ಸಿನಲ್ಲೇ ಸೀನಿಯರ್ ತಂಡಕ್ಕೆ ಆಯ್ಕೆಯಾಗಲು ಒಡಿಶಾದಲ್ಲಿನ ‘ಹಾಕಿ ಸಂಸ್ಕೃತಿ’ಯೇ ಕಾರಣ. ಅಲ್ಲಿನ ಸರ್ಕಾರವು ಉದಯೋನ್ಮುಖ ಆಟಗಾರ್ತಿಯರನ್ನು ಗುರುತಿಸಿ ಅವರಿಗೆ ವಸತಿ ಸಹಿತ ತರಬೇತಿ ನೀಡುತ್ತಿದೆ. ಹಾಕಿ ಅಂಕಣಗಳನ್ನು ನಿರ್ಮಿಸುತ್ತಿದ್ದು ಅಭ್ಯಾಸಕ್ಕೆ ಪೂರಕವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.