ಪರ್ತ್: ಭಾರತ ವನಿತೆಯರ ಹಾಕಿ ತಂಡವು ಮಂಗಳವಾರ ಆರಂಭವಾಗುವ ನಾಲ್ಕು ಪಂದ್ಯಗಳ ಸರಣಿಯಲ್ಲಿ ಆತಿಥೇಯ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಸರಣಿಯ ಮೂಲಕ ಎಫ್ಐಎಚ್ ನೇಷನ್ಸ್ ಕಪ್ ಟೂರ್ನಿಗೆ ತನ್ನ ಸಿದ್ಧತೆಗಳನ್ನು ಸಕಾರಾತ್ಮಕವಾಗಿ ಆರಂಭಿಸುವ ದೂರದೃಷ್ಟಿ ಹೊಂದಿದೆ.

ಜೂನ್ 15ರಿಂದ 21ರವರೆಗೆ ಆಕ್ಲೆಂಡ್ನಲ್ಲಿ ನೇಷನ್ಸ್ ಕಪ್ ನಡೆಯಲಿದೆ. ಅದಕ್ಕೂ ಮುಂಚಿತವಾಗಿ ಸಲೀಮಾ ಟೆಟೆ ನೇತೃತ್ವದ ಭಾರತ ತಂಡದಲ್ಲಿ ಸೂಕ್ತ ಹೊಂದಾಣಿಕೆ ಮತ್ತು ಸಮತೋಲನ ಸಾಧಿಸುವ ಪ್ರಯತ್ನದಲ್ಲಿದೆ. ಸರಣಿಯ ನಾಲ್ಕು ಪಂದ್ಯಗಳು ಪರ್ತ್ನಲ್ಲಿ ಕ್ರಮವಾಗಿ ಮೇ 26, 27, 29 ಹಾಗೂ 30ರಂದು ನಡೆಯಲಿವೆ.

ವರ್ಷದ ಆರಂಭದಲ್ಲಿ ಬಲಿಷ್ಠ ಅರ್ಜೆಂಟೀನಾ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯನ್ನು 2–2ರಿಂದ ಸಮಬಲ ಸಾಧಿಸಿದ್ದ ಭಾರತ ತಂಡದ ಆತ್ಮವಿಶ್ವಾಸ ವೃದ್ಧಿಸಿದೆ. ವಿಶ್ವ ರ್ಯಾಂಕಿಂಗ್ನಲ್ಲಿ ಎರಡನೇ ಸ್ಥಾನದಲ್ಲಿರುವ ತಂಡದ ವಿರುದ್ಧ ಮೊದಲೆರಡು ಪಂದ್ಯ ಸೋತಿದ್ದ ಭಾರತ, ನಂತರದ ಪಂದ್ಯಗಳಲ್ಲಿ ಪಾರಮ್ಯ ಮೆರೆದಿತ್ತು.

ಕೋಚ್ ಸ್ಯೋರ್ಡ್ ಮರಿನ್ ಅವರ ಮಾರ್ಗದರ್ಶನದಲ್ಲಿ ಆಟಗಾರ್ತಿಯರು ಬೆಂಗಳೂರಿನ ಸಾಯ್ನಲ್ಲಿ ಕೆಲವು ವಾರಗಳಿಂದ ತರಬೇತಿ ಪಡೆದು, ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. 22 ಆಟಗಾರ್ತಿಯರನ್ನು ಒಳಗೊಂಡ ತಂಡವು ಯುವ ಮುಖಗಳ ಮತ್ತು ಅನುಭವಿಗಳ ಮಿಶ್ರಣವನ್ನು ಹೊಂದಿದೆ.

ಉದಯೋನ್ಮುಖ ಪ್ರತಿಭೆಗಳಾದ ಸೋನಮ್, ಶಿಲ್ಪಿ ಡಬಾಸ್, ಹಿನಾ ಬಾಬೊ ಮತ್ತು ಲಾಲ್ಥಂಟಲುವಾಂಗಿ ತಮ್ಮ ಚೊಚ್ಚಲ ಅವಕಾಶಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಭಾರತ ತಂಡವು ಎಫ್ಐಎಚ್ ವಿಶ್ವ ಕ್ರಮಾಂಕದಲ್ಲಿ 9ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ಎಂಟನೇ ಸ್ಥಾನದಲ್ಲಿದೆ.

ಪಂದ್ಯ ಆರಂಭ: ಸಂಜೆ 5

ನೇರಪ್ರಸಾರ: ಡಿಡಿ ಸ್ಪೋರ್ಟ್ಸ್, ಫ್ಯಾನ್ ಕೋಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.