ಟಿಯಾಂಜಿನ್ (ಚೀನಾ): ಭಾರತದ ಗೌತಮ್ ಮಂಕಾಸ್ ಹಾಗೂ ಅನು ಅವರು ಇಲ್ಲಿ ನಡೆಯುತ್ತಿರುವ 10ನೇ ವಿಶ್ವ ವುಶು ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಭಾನುವಾರ ಕಂಚಿನ ಪದಕ ಗೆದ್ದುಕೊಂಡರು. ಉಪೇಂದ್ರೊ ತೌಗಮ್, ಪಮಾ ಹೀಬಾ ಸಿಂಗ್, ಯುವರಾಜ್ ಹಾಗೂ ವಿಕ್ಟರ್ ಅವರು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿದರು.

ಗೌತಮ್ ಅವರು ಬಾಲಕರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಪರಾಭವಗೊಂಡರು. ಅನು ಅವರು ನಾಲ್ಕರ ಘಟ್ಟದಲ್ಲಿ ಚೀನಾದ ಝಾಂಗ್ ಲಿನಿಂಗ್ ವಿರುದ್ಧ ಸೋತರು.

ಉಪೇಂದ್ರೊ ಅವರು ಸೆಮಿಫೈನಲ್ ಪಂದ್ಯದಲ್ಲಿ ಈಜಿಪ್ಟ್ನ ಅಹ್ಮದ್ ಮೊಹಮ್ಮದ್ ಅವರನ್ನು ಸೋಲಿಸಿದರು. ಪಮಾ ಅವರು ಸೆನೆಗಲ್ನ ಅಲಿಮೂ ಸಿ ಅವರನ್ನು ಮಣಿಸಿ, ಫೈನಲ್ ಪ್ರವೇಶಿಸಿದರು. ಯುವರಾಜ್ ಹಾಗೂ ವಿಕ್ಟರ್ ಅವರು ಸೆಮಿಫೈನಲ್ ಪಂದ್ಯಗಳಲ್ಲಿ ಕ್ರಮವಾಗಿ ಫಿಲಿಪ್ಪೀನ್ಸ್ನ ಷಿವೀಲ್ ಬಂಟಾಲಿ ಮತ್ತು ಈಜಿಪ್ಟ್ನ ಸಯೀದ್ ಕರೀಂ ಮೊಹಮ್ಮದ್ ವಿರುದ್ಧ ಗೆಲುವು ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.