ಜಕಾರ್ತ (ಪಿಟಿಐ): ಭಾರತದ ಪಿ.ವಿ.ಸಿಂಧು ಅವರು ಮಂಗಳವಾರ ಇಲ್ಲಿ ಆರಂಭಗೊಂಡ ಇಂಡೊನೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಆದರೆ, ಅನುಭವಿ ಆಟಗಾರರಾದ ಲಕ್ಷ್ಯ ಸೇನ್ ಹಾಗೂ ಕಿದಂಬಿ ಶ್ರೀಕಾಂತ್ ಅವರು ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲೇ ಹೊರಬಿದ್ದರು.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಅವರು ಮಹಿಳೆಯರ ಸಿಂಗಲ್ಸ್ ಮೊದಲ ಸುತ್ತಿನ ಪಂದ್ಯದಲ್ಲಿ 25–23, 21–16ರಿಂದ ನೇರ ಆಟಗಳಲ್ಲಿ ಥಾಯ್ಲೆಂಡ್ನ ಬುಸಾನನ್ ಒಂಗ್ ಬಮ್ರುಂಗ್ಫನ್ ಅವರನ್ನು ಸೋಲಿಸಿದರು. 51 ನಿಮಿಷ ನಡೆದ ಈ ಹಣಾಹಣಿಯಲ್ಲಿ ಬುಸಾನನ್ ಅವರು ಮೊದಲ ಗೇಮ್ನಲ್ಲಿ ನಿಕಟ ಪೈಪೋಟಿ ಒಡ್ಡಿದರು. 30 ವರ್ಷ ವಯಸ್ಸಿನ ಸಿಂಧು ಆಕ್ರಮಣಕಾರಿ ಆಟದೊಂದಿಗೆ ಎರಡನೇ ಗೇಮ್ಅನ್ನು ಸುಲಭವಾಗಿ ತಮ್ಮದಾಗಿಸಿಕೊಂಡರು.

ಈ ಗೆಲುವಿನೊಂದಿಗೆ, ಸಿಂಧು ಅವರು ಅಕ್ಟೋಬರ್ 2023ರ ನಂತರ ಮೊದಲ ಬಾರಿ ವಿಶ್ವ ರ್ಯಾಂಕಿಂಗ್ನ ಅಗ್ರ 10ರಲ್ಲಿ ಸ್ಥಾನ ಪಡೆದರು.

ವಿಶ್ವದ ಅಗ್ರಮಾನ್ಯ ಆಟಗಾರ್ತಿ, ದಕ್ಷಿಣ ಕೊರಿಯಾದ ಆ್ಯನ್ ಸೆ ಯಂಗ್ ಹಾಗೂ ಸಿಂಧು ಅವರು ಎರಡನೇ ಸುತ್ತಿನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಈ ಹಿಂದಿನ 9 ಮುಖಾಮುಖಿಗಳಲ್ಲೂ ಯಂಗ್ ಅವರೇ ಗೆಲುವು ಸಾಧಿಸಿದ್ದು, ಸಿಂಧು ಮೊದಲ ಗೆಲುವಿಗಾಗಿ ಎದುರುನೋಡುತ್ತಿದ್ದಾರೆ.

ಲಯ ಕಂಡುಕೊಳ್ಳಲು ಪರದಾಡುತ್ತಿರುವ ವಿಶ್ವದ ಮಾಜಿ ಅಗ್ರಮಾನ್ಯ ಆಟಗಾರ ಶ್ರೀಕಾಂತ್ ಅವರು 19–21, 15–21ರಿಂದ ನೇರ ಆಟಗಳಲ್ಲಿ ಜಪಾನ್ನ ಯೂಶಿ ತನಾಕ ಎದುರು ಪರಾಭವಗೊಂಡರು. ಲಕ್ಷ್ಯ ಅವರು 19–21, 16–21ರಿಂದ ಆತಿಥೇಯ ದೇಶದ ಅಲ್ವಿ ಫರ್ಹಾನ್ ಅವರಿಗೆ ಮಣಿದರು.

ಮಾಳವಿಕಾ ಬನ್ಸೋಡ್ ಅವರ ಹೋರಾಟವೂ ಮೊದಲ ಸುತ್ತಿನಲ್ಲಿಯೇ ಅಂತ್ಯಗೊಂಡಿತು. ಅವರು 12–21, 10–21ರಿಂದ ಏಳನೇ ಶ್ರೇಯಾಂಕದ ಆಟಗಾರ್ತಿ, ಥಾಯ್ಲೆಂಡ್ನ ಪೊರ್ನಪವೀ ಶೊಶುವಾಂಗ್ ಅವರಿಗೆ ಮಣಿದರು.

ಪುರುಷರ ಡಬಲ್ಸ್ನಲ್ಲಿ ಹರಿಹರನ್ ಅಮ್ಸಕರುಣನ್– ಎಂ.ಆರ್.ಅರ್ಜುನ್ ಜೋಡಿ ಪ್ರಿಕ್ವಾರ್ಟರ್ಫೈನಲ್ಗೆ ಮುನ್ನಡೆಯಿತು. ಈ ಜೋಡಿ ಮೊದಲ ಸುತ್ತಿನಲ್ಲಿ 21–18, 21–10ರಿಂದ ಮಲೇಷ್ಯಾದ ನೂರ್ ಮೊಹಮ್ಮದ್ ಅಝರಿನ್ ಆಯೂಬ್ ಮತ್ತು ತಾನ್ ವೀ ಕಿಯೊಂಗ್ ಅವರನ್ನು ಹಿಮ್ಮಟ್ಟಿಸಿತು.

ಮಹಿಳೆಯರ ಡಬಲ್ಸ್ನಲ್ಲಿ ಟ್ರೀಸಾ ಜೋಳಿ– ಗಾಯತ್ರಿ ಗೋಪಿಚಂದ್ ಅವರೂ ಮೊದಲ ಸುತ್ತಿನಲ್ಲಿಯೇ ಹೊರಬಿದ್ದರು. ಈ ಜೋಡಿ 14–21, 12–21ರಿಂದ ಆತಿಥೇಯ ರಾಷ್ಟ್ರದ ಫೆಬ್ರಿಯಾನಾ ದ್ವೀಪುಜಿ ಕುಸುಮ– ಮೈಲಿಸಾ ಟ್ರಿಯಾಸ್ ಪುಷ್ಪಿತಸರಿ ಅವರಿಗೆ ಮಣಿಯಿತು.

ಮಿಶ್ರ ಡಬಲ್ಸ್ನಲ್ಲಿ ಧ್ರುವ್ ಕಪಿಲ– ತನಿಷಾ ಕ್ರಾಸ್ಟೊ ಜೋಡಿಯೂ ಹೊರಬಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-1707963762

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.