ನವದೆಹಲಿ (ಪಿಟಿಐ): ಭಾರತದ ನೀರೂ ಧಂಡಾ ಹಾಗೂ ವಿವಾನ್ ಕಪೂರ್ ಜೋಡಿಯು ಕಜಾಕಸ್ತಾನದ ಅಲ್ಮಾಟಿಯಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ (ಶಾಟ್ಗನ್) ವಿಶ್ವಕಪ್ನ ಟ್ರಾಪ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾನುವಾರ ಕಂಚಿನ ಪದಕಕ್ಕೆ ಗುರಿಯಿಟ್ಟರು.

ನೀರೂ ಹಾಗೂ ವಿವಾನ್ ಅವರು ಫೈನಲ್ನ ಮೊದಲ ಮೂರು ಸುತ್ತುಗಳಲ್ಲಿ 30 ಗುರಿಗಳ ಪೈಕಿ 24ರಲ್ಲಿ ಯಶಸ್ವಿಯಾದರು. ಚೀನಾ ತೈಪೆಯ ಕುನ್–ಪಿ ಯಾಂಗ್ ಹಾಗೂ ವಾನ್–ಯೂ ಲ್ಯೂ ಜೋಡಿ ನಾಲ್ಕು ಸುತ್ತುಗಳಿಂದ 36 ಅಂಕ ಗಳಿಸಿ, ವಿಶ್ವದಾಖಲೆ ಯೊಂದಿಗೆ ಸ್ವರ್ಣ ಜಯಿಸಿತು. ಇಟಲಿಯ ಸಿಲ್ವಾನಾ ಸ್ಟಾಂಕೊ– ಮೌರೊ ಡಿ ಫಿಲಿಪ್ಸ್ ಜೋಡಿ ನಾಲ್ಕು ಸುತ್ತುಗಳ 40 ಗುರಿಗಳ ಪೈಕಿ 33ರಲ್ಲಿ ಯಶಸ್ಸು ಗಳಿಸಿತು. ಅದರೊಂದಿಗೆ ರಜತ ಪದಕಕ್ಕೆ ಕೊರಳೊಡ್ಡಿತು.

ಮಧ್ಯಪ್ರದೇಶದ ನೀರೂ ಹಾಗೂ ರಾಜಸ್ಥಾನದ ವಿವಾನ್ ಅವರು ಕ್ವಾಲಿಫಿಕೇಶನ್ ಸುತ್ತಿನಲ್ಲಿ 143 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದರು. ಪ್ಯಾರಿಸ್ ಒಲಿಂಪಿಕ್ಸ್ ಬೆಳ್ಳಿ ವಿಜೇತ ಸ್ಟಾಂಕೊ– ಮಾಜಿ ವಿಶ್ವ ಚಾಂಪಿಯನ್ ಮೌರೊ ಜೋಡಿ (145 ಅಂಕ) ಅಗ್ರಸ್ಥಾನದೊಂದಿಗೆ ಹಾಗೂ ಯಾಂಗ್– ವಾನ್ ಜೋಡಿ (143) ಮೂರನೇ ಸ್ಥಾನದೊಂದಿಗೆ ಫೈನಲ್ ಸುತ್ತು ಪ್ರವೇಶಿಸಿದ್ದವು.

ಕಣದಲ್ಲಿದ್ದ ಭಾರತದ ಮತ್ತೊಂದು ಜೋಡಿ ಅಹ್ವರ್ ರಿಜ್ವಿ– ಪ್ರಗತಿ ದುಬೆ (130 ಅಂಕ) 23ನೇ ಸ್ಥಾನ ಪಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-51-2042557765

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.