ಅಲ್ಮಾಟಿ (ಕಜಾಕಸ್ತಾನ), (ಇಟಿಐ): ಭಾರತದ ಸ್ಕೀಟ್ ಶೂಟರ್ಗಳು, ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ ಶಾಟ್ಗನ್ ಸ್ಪರ್ಧೆಯಲ್ಲಿ ಮಂಗಳವಾರ ನಿರಾಸೆ ಅನುಭವಿಸಿದರು. ಯಾರಿಗೂ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

ಒಲಿಂಪಿಯನ್ನರಾದ ಮೈರಾಜ್ ಅಹ್ಮದ್ ಖಾನ್ ಮತ್ತು ರೈಝಾ ದಿಲ್ಲೋನ್ ಅವರು ಭಾರತದ ಶೂಟರ್ಗಳ ಪೈಕಿ ಇದ್ದುದರಲ್ಲಿ ಉತ್ತಮ ಸಾಧನೆ ತೋರಿದರು. ಮೊದಲ ದಿನ (ಸೋಮವಾರ) 26ನೇ ಸ್ಥಾನದಲ್ಲಿದ್ದ ಮೈರಾಜ್ ಸೋಮವಾರ ಅಂತಿಮ ಎರಡು ಸರಣಿಗಳಲ್ಲಿ 23 ಮತ್ತು 25 ಸ್ಕೋರ್ ದಾಖಲಿಸಿ ಒಟ್ಟಾರೆ 119 ಸ್ಕೋರ್ನೊಡನೆ ಅರ್ಹತಾ ಸುತ್ತಿನಲ್ಲಿ 18ನೇ ಸ್ಥಾನಗಳಿಸಿದರು.

ರ್ಯಾಂಕಿಂಗ್ ಪಾಯಿಂಟ್ಗಳಿಗಾಗಷ್ಟೇ ಸ್ಪರ್ಧಿಸಿರುವ ಭವತೇಗ್ ಸಿಂಗ್ ಗಿಲ್ ಅವರು 19ನೇ ಸ್ಥಾನದಲ್ಲಿ ಅರ್ಹತಾ ಸುತ್ತನ್ನು ಪೂರೈಸಿ, ಭಾರತದ ಶೂಟರ್ಗಳ ಪೈಕಿ ಎರಡನೇ ಉತ್ತಮ ಸಾಧನೆ ದಾಖಲಿಸಿದರು. ಕಣದಲ್ಲಿದ್ದ ಭಾರತದ ಮೂರನೇ ಸ್ಪರ್ಧಿ ಒಲಿಂಪಿಯನ್ ಅನಂತಜೀತ್ ಸಿಂಗ್ ನರುಕಾ ಒಟ್ಟಾರೆ 117 ಸ್ಕೋರ್ನಡೊನೆ 38ನೇ ಸ್ಥಾನ ಗಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-51-107842618

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.