ಟ್ಯಾಂಜಿಯರ್, (ಮೊರಾಕ್ಕೊ): ಭಾರತದ ಶೂಟರ್ಗಳು ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವಕಪ್ನಲ್ಲಿ ಶನಿವಾರ ನಿರಾಸೆ ಮೂಡಿಸಿದರು. ಶಾಟ್ಗನ್ ಸ್ಕೀಟ್ ವಿಭಾಗದಲ್ಲಿ ದೇಶದ ಯಾವುದೇ ಸ್ಪರ್ಧಿಗಳಿಗೆ ಫೈನಲ್ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.

ಒಲಿಂಪಿಯನ್ ಮಹೇಶ್ವರಿ ಚೌಹಾನ್ ಅವರು ಮೊದಲ ದಿನ ನಡೆದ ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿ, ಅಗ್ರ ಎಂಟರ ಸಮೀಪಕ್ಕೆ ಬಂದರೂ ಫೈನಲ್ ಟಿಕೆಟ್ ಲಭಿಸಲಿಲ್ಲ.

ಮಹೇಶ್ವರಿ ನಾಲ್ಕನೇ ಮತ್ತು ಐದನೇ ಸರಣಿಯಲ್ಲಿ 23 ಮತ್ತು 21 ಅಂಕ ಸೇರಿದಂತೆ ಒಟ್ಟು 113 ಪಾಯಿಂಟ್ಸ್ ಗಳಿಸಿದರು. ಭಾರತದ ಸ್ಪರ್ಧಿಗಿಂತ ಎರಡು ಅಂಕ ಹೆಚ್ಚು ಪಡೆದ ಕತಾರ್ನ ರೀಮ್ ಘನೆಮ್ ಅಲ್ ಶರ್ಶಾನಿ (115) ಎಂಟನೇ ಸ್ಥಾನದೊಂದಿಗೆ ಫೈನಲ್ ಸುತ್ತು ಪ್ರವೇಶಿಸಿದರು.

ಅಂತಿಮ ಸರಣಿಯಲ್ಲಿ ಪರಿಪೂರ್ಣ 25 ರನ್ ಗಳಿಸಿದ ದರ್ಶನಾ ರಾಥೋಡ್ (112 ಅಂಕ) 19ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು. ಅವರ ಸಹೋದರಿ ಯಶಸ್ವಿ ರಾಥೋಡ್ (110) 23ನೇ ಸ್ಥಾನ ಪಡೆದರು. ರ್ಯಾಂಕಿಂಗ್ ಪಾಯಿಂಟ್ಸ್ಗಳಿಗಾಗಿ ಸ್ಪರ್ಧಿಸಿದ್ದ ಅರೀಬಾ ಖಾನ್ ಮತ್ತು ಮಾನ್ಸಿ ರಘುವಂಶಿ ತಲಾ 112 ಅಂಕ ಗಳಿಸಿದರು.

ಪುರುಷರ ವಿಭಾಗದಲ್ಲಿ ಪರಂಪಾಲ್ ಸಿಂಗ್ 117 ಅಂಕಗಳೊಂದಿಗೆ 26ನೇ ಸ್ಥಾನ ಪಡೆದು ನಿರಾಸೆ ಮೂಡಿಸಿದರು. ಜ್ಯೋತಿರಾದಿತ್ಯ ಸಿಂಗ್ ಸಿಸೋಡಿಯಾ 108 ಅಂಕಗಳೊಂದಿಗೆ 62ನೇ ಸ್ಥಾನ, ಮಾನ್ ಸಿಂಗ್ 105 ಅಂಕಗಳೊಂದಿಗೆ 65ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು.

ಮಂಗಳವಾರದಿಂದ ಟ್ರ್ಯಾಪ್ ಶೂಟರ್ಗಳ ಅಭಿಯಾನ ಆರಂಭವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.