ಮ್ಯೂನಿಕ್: ಭಾರತದ ಶೂಟರ್ಗಳಾದ ಮನು ಬಾಕರ್ ಮತ್ತು ಸಾಮ್ರಾಟ್ ರಾಣಾ ಅವರು ಐಎಸ್ಎಸ್ಎಫ್ ವಿಶ್ವ ಕಪ್ ಟೂರ್ನಿಯಲ್ಲಿ ಶನಿವಾರ 10 ಮೀ. ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡರು.

ಈ ಜೋಡಿ ಫೈನಲ್ನಲ್ಲಿ 483.6 ಸ್ಕೋರ್ ಗಳಿಸಿತು. ಚೀನಾದ ಕ್ವಿಯಾನ್ಕ್ಸುನ್ ಯಾವೊ– ಕೈ ಹು ಅವರು (483.9) ಚಿನ್ನದ ಪದಕ ಗೆದ್ದುಕೊಂಡರು. ಶೆನ್ ಯಿಯಾವೊ– ಬು ಶುಯಾಯಿಹಾಂಗ್ (ಚೀನಾ) ಜೋಡಿ (418.0) ಕಂಚಿನ ಪದಕ ಗಳಿಸಿತು.

ಮನು– ಸಾಮ್ರಾಟ್ ಜೋಡಿ ಅರ್ಹತಾ ಸುತ್ತಿನಲ್ಲಿ 583 ಸ್ಕೋರ್ನೊಡನೆ ಫೈನಲ್ ತಲುಪಿತ್ತು. ಭಾರತದ ಇನ್ನೊಂದು ಜೋಡಿಯಾದ ಸುರುಚಿ ಇಂದರ್ ಸಿಂಗ್– ಶ್ರವಣ್ ಕುಮಾರ್ (575) ಅವರು 10ನೇ ಸ್ಥಾನ ಗಳಿಸಿದರು.

10 ಮೀ. ಏರ್ ರೈಫಲ್ ಮಿಶ್ರ ಸ್ಪರ್ಧೆ ವಿಭಾಗದಲ್ಲಿ ಇಳವೆನಿಲ್ ವಳರಿವನ್– ಅರ್ಜುನ್ ಬಬುಟಾ ಜೋಡಿ 14ನೇ ಸ್ಥಾನ ಗಳಿಸಿದರೆ, ಆರ್ಯ ಬೋಸ್– ತುಷಾರ್ ಸಾಹು ಅವರು 16ನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.